ETV Bharat / state

ಬೆಣ್ಣೆನಗರಿಯಲ್ಲಿ ಕಾಂಗ್ರೆಸ್ ಕೈ ಹಿಡಿದ ಮತದಾರ: ದಾವಣಗೆರೆಯಲ್ಲಿ ಗೆದ್ದು ಬೀಗಿದ ಅಪ್ಪ, ಮಗ

ದಾವಣಗೆರೆಯನ್ನು ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್​ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದರ ಜೊತೆಗೆ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಮತ್ತೆ ಗೆಲುವು ದಾಖಲಿಸಿದ್ದಾರೆ.

Etv Bharathuge-victory-for-congress-in-davangere-shamanuru-shivashankarappa-reaction
ಬೆಣ್ಣೆನಗರಿಯಲ್ಲಿ ಕಾಂಗ್ರೆಸ್ ಕೈ ಹಿಡಿದ ಮತದಾರ: ದಾವಣಗೆರೆಯಲ್ಲಿ ಗೆದ್ದು ಬೀಗಿದ ಅಪ್ಪ, ಮಗ
author img

By

Published : May 13, 2023, 9:56 PM IST

Updated : May 13, 2023, 11:09 PM IST

ಬೆಣ್ಣೆನಗರಿಯಲ್ಲಿ ಕಾಂಗ್ರೆಸ್ ಕೈ ಹಿಡಿದ ಮತದಾರ: ದಾವಣಗೆರೆಯಲ್ಲಿ ಗೆದ್ದು ಬೀಗಿದ ಅಪ್ಪ, ಮಗ

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ 2013ರ ಫಲಿತಾಂಶ ರಿಪೀಟ್ ಆಗಿದೆ. ದಾವಣಗೆರೆ ಮತದಾರರು ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು, ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿಸಿದ್ದಾರೆ. ವಿಶೇಷ ಅಂದರೆ ದಾವಣಗೆರೆ ದಕ್ಷಿಣದಿಂದ ತಂದೆ ಶಾಮನೂರು ಶಿವಶಂಕರಪ್ಪ 92ರ ವಯಸ್ಸಿನಲ್ಲಿ ಗೆದ್ದು ಬೀಗಿದರೆ, ಇತ್ತ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್‌ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

ದಾವಣಗೆರೆ ಕಾಂಗ್ರೆಸ್ ಭದ್ರಕೋಟೆ: ಸತತವಾಗಿ ಇಲ್ಲಿನ ಮತದಾರರು ಕಾಂಗ್ರೆಸ್ ಆಶೀರ್ವಾದ ಮಾಡುತ್ತಲೇ ಬಂದಿದ್ದಾರೆ. ಅದರೆ 2018 ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ಪಾಳೆಯ ಛಿದ್ರ ಮಾಡಿತ್ತು. ಇದೀಗ ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದಾವಣಗೆರೆಯ ಪ್ರಬುದ್ಧ ಮತದಾರರು ಏಳು ಮತ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಜೈ ಅಂದಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 92ನೇ ವಯಸ್ಸಿನಲ್ಲೂ ಗೆಲುವು ಸಾಧಿಸಿರುವುದ್ದು, ಇಡೀ ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಶಾಮನೂರು ಶಿವಶಂಕರಪ್ಪ ಗೆದ್ದ ಹಿರಿಯ ರಾಜಕಾರಣಿ ಎಂದು ಇತಿಹಾಸ ಬರೆದಿದ್ದಾರೆ.

ಇನ್ನು ಶಾಮನೂರು ಶಿವಶಂಕರಪ್ಪನವರ ಪುತ್ರ ಮಾಜಿ ಸಚಿವ ಮತ್ತೆ ಗೆಲ್ಲುವ ಮೂಲಕ ಸಚಿವರಾಗುವ ಹುಮ್ಮಸ್ಸಿನಲ್ಲಿದ್ದಾರೆ. ಮತ್ತೊಂದೆಡೆ ಹೊನ್ನಾಳಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದ ಎಂಪಿ ರೇಣುಕಾಚಾರ್ಯಗೆ ಶಾಂತನಗೌಡ್ರು ಮಣ್ಣು ಮುಕ್ಕಿಸಿದ್ದಾರೆ. ಚನ್ನಗಿರಿಯಲ್ಲಿ ಶಿವಗಂಗಾ ಬಸವರಾಜ್, ಮಾಯಕೊಂಡದಲ್ಲಿ ಬಸವಂತಪ್ಪ, ಜಗಳೂರಿನಲ್ಲಿ ದೇವೇಂದ್ರಪ್ಪ ಅವರಿಗೆ ಮತದಾರ ಜೈ ಎಂದಿದ್ದು, ಹರಿಹರ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದೆ. ಇಲ್ಲಿ ಬಿ ಪಿ ಹರೀಶ್ ಗೆದ್ದು ಬೀಗಿದ್ದಾರೆ.

ದಾವಣಗೆರೆ ಉತ್ತರ ಹಾಗು ದಕ್ಷಿಣದಲ್ಲಿ ತಂದೆ ಮಗ ಇಬ್ಬರೂ ಗೆಲುವಿನ ನಗಾರಿ ಬಾರಿಸಿದ್ದಾರೆ. ಈ ವೇಳೆ ಮಾತನಾಡಿದ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ, "ಜನ ತಮ್ಮ ತೀರ್ಪು ನೀಡಿದ್ದಾರೆ, ಕಾಂಗ್ರೆಸ್ ಸರ್ಕಾರ ಮಾಡುತ್ತೇವೆ. ಶಾಸಕರು ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡುತ್ತಾರೆ. ಬಿಜೆಪಿ ಅಲೆಯಲ್ಲೇ ಕಾಂಗ್ರೆಸ್ ಕೊಡವಿ ಎದ್ದಿದೆ, ಬಿಜೆಪಿ ಅಭ್ಯರ್ಥಿ ವೀಕ್ ಕ್ಯಾಂಡಿಡೇಟ್​ ಆಗಿದ್ದರು. ಅವಾಗಲೇ ಗೆಲ್ಲುತ್ತೇನೆ ಎಂದು ಹೇಳಿದ್ದೆ." ಎಂದು ಹೇಳಿದ್ರು.

ಬಳಿಕ ಎಸ್ಎಸ್ ಮಲ್ಲಿಕಾರ್ಜುನ್‌ ಪ್ರತಿಕ್ರಿಯಿಸಿ, "ಜಿಲ್ಲೆಯ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಏಳರಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಿಸಿದ್ದಾರೆ‌. ನಾನು ಕೃತಜ್ಞತೆ ಸಲ್ಲಿಸುವೆ. ಅಭಿವೃದ್ಧಿ ಪಥದಲ್ಲಿ ಕಾಂಗ್ರೆಸ್ ಸರ್ಕಾರ ಸಾಗುತ್ತೆ, ಬಿಜೆಪಿಯ ಭ್ರಷ್ಟ ಆಡಳಿತದಿಂದ ಬಡವರು ಬೇಸತ್ತಿದ್ದಾರೆ. 40% ಕಮಿಷನ್​ನಲ್ಲಿ ಮುಳುಗಿದ್ದರಿಂದ ಅವರು ಜನರನ್ನು ಗಮನಿಸಿಲ್ಲ. ನಾನು ಹೇಳಿದ್ದೇ 135 ಸೀಟ್​ ಬರುತ್ತೆ ಎಂದು ಆ ಫಲಿತಾಂಶ ಬಂದಿದೆ" ಎಂದರು.

ಏಳು ಕ್ಷೇತ್ರದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಅರಳಿದ ಕಮಲ: ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ ಕೈ ಜಯಭೇರಿ ಬಾರಿಸಿದ್ದು, ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದೆ. ಹರಿಹರದಲ್ಲಿ ಕಮಲ ಅರಳಿಸುವಲ್ಲಿ ಬಿ ಪಿ ಹರೀಶ್ ಯಶಸ್ವಿಯಾಗಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು,"ಮತದಾರರ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೆಬೇಕು, ಮತ್ತೆ ಬಿಜೆಪಿ ಸರ್ಕಾರ ಸ್ಥಾಪಿಸುವ ಹುಮ್ಮಸ್ಸಿನಲ್ಲಿದ್ದೆವು, ಅದರೆ ಜನರು ಕಾಂಗ್ರೆಸ್​ಗೆ ಆಶೀರ್ವಾದ ಮಾಡಿದ್ದಾರೆ. ದಾವಣಗೆರೆಯಲ್ಲಿ ನಾನು ಒಬ್ಬನೇ ಬಿಜೆಪಿ ಶಾಸಕ" ಎಂದು ಹೇಳಿದ್ರು.

ಯಾರು ಎಷ್ಟು ಮತಗಳನ್ನು ಪಡೆದಿದ್ದಾರೆ, ಫಲಿತಾಂಶ ಹೀಗಿದೆ
ಹರಿಹರ ವಿಧಾನಸಭಾ ಕ್ಷೇತ್ರ:
ಬಿಪಿ ಹರೀಶ್-ಬಿಜೆಪಿ-63924
ಶ್ರೀನಿವಾಸ್ ನಂದಿಗಾವಿ-ಕಾಂಗ್ರೆಸ್​-59620
ಎಚ್ ಎಸ್ ಶಿವಶಂಕರ-ಜೆಡಿಎಸ್- 40580
ಗೆಲುವು- ಬಿಜೆಪಿ, ಅಂತರ- 4304

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ:
ಎಸ್ ಎಸ್ ಮಲ್ಲಿಕಾರ್ಜುನ- ಕಾಂಗ್ರೆಸ್ - 92709
ಲೋಕಿಕೆರೆ ನಾಗರಾಜ್- ಬಿಜೆಪಿ- 68523
ಬಾತಿ ಶಂಕರ್ - ಜೆಡಿಎಸ್- 925
ಗೆಲುವು - ಕಾಂಗ್ರೆಸ್​, ಅಂತರ- 24186

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ:
ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ 84298
B G ಅಜಯ್ ಕುಮಾರ್ - ಬಿಜೆಪಿ 56410
ಅಮಾನುಲ್ಲಾ ಖಾನ್ - ಜೆಡಿಎಸ್ - 1296
ಗೆಲುವು - ಕಾಂಗ್ರೆಸ್​, ಅಂತರ- 27888

ಮಾಯಕೊಂಡ ವಿಧಾನಸಭಾ ಕ್ಷೇತ್ರ
ಕೆ ಎಸ್ ಬಸವಂತಪ್ಪ- ಕಾಂಗ್ರೆಸ್ 70204
ಪುಷ್ಪಾ ವಾಗೀಶ್ ಸ್ವಾಮಿ- ಪಕ್ಷೇತರ- 37334
ಬಸವರಾಜ್ ನಾಯ್ಕ್ - ಬಿಜೆಪಿ- 34144
ಆನಂದಪ್ಪ-ಜೆಡಿಎಸ್ - 12806
ಗೆಲುವು- ಕಾಂಗ್ರೆಸ್ - ಅಂತರ 32870

ಚನ್ನಗಿರಿ ವಿಧಾನಸಭಾ ಕ್ಷೇತ್ರ:
ಬಸವರಾಜ್ ಶಿವಗಂಗಾ - ಕಾಂಗ್ರೆಸ್ - 77414
ಮಾಡಾಳು ಮಲ್ಲಿಕಾರ್ಜುನ - ಪಕ್ಷೇತರ- 61260
ಎಚ್ ಎಸ್ ಶಿವಕುಮಾರ್ - ಬಿಜೆಪಿ- 21229
ತೆಜಸ್ವಿ ಪಟೇಲ್ - ಜೆಡಿಎಸ್ 1204
ಗೆಲುವು- ಕಾಂಗ್ರೆಸ್, ಅಂತರ - 16154

ಹೊನ್ನಾಳಿ ವಿಧಾನಸಭಾ ಕ್ಷೇತ್ರ:
ಡಿ ಜಿ ಶಾಂತನಗೌಡ -ಕಾಂಗ್ರೆಸ್- 92392
ಎಂ ಪಿ ರೇಣುಕಾಚಾರ್ಯ- ಬಿಜೆಪಿ- 74832
ಗೆಲುವು- ಕಾಂಗ್ರೆಸ್, ಅಂತರ -17560

ಜಗಳೂರು ವಿಧಾನಸಭಾ ಕ್ಷೇತ್ರ:
ಬಿ ದೇವೆಂದ್ರಪ್ಪ- ಕಾಂಗ್ರೆಸ್- 50765
S V ರಾಮಚಂದ್ರ - ಬಿಜೆಪಿ- 49891
H P ರಾಜೇಶ್ - ಪಕ್ಷೇತರ- 49442
ಗೆಲುವು-ಕಾಂಗ್ರೆಸ್, ಅಂತರ- 874

ಇದನ್ನೂ ಓದಿ: ಅಂದು 1 ಮತದ ಅಂತರದಿಂದ ಸೋತಿದ್ದ ARK ಗೆ 59 ಸಾವಿರ ಮತಗಳ ಗೆಲುವು: ಎನ್​ ಮಹೇಶ್​ಗೆ ಹೀನಾಯ ಸೋಲು

Last Updated : May 13, 2023, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.