ETV Bharat / state

ವಿಜಯದಶಮಿ ಶೋಭಾಯಾತ್ರೆಗೆ ಅದ್ಧೂರಿ ಚಾಲನೆ.. ಡಿಜೆಗೆ ಸಖತ್ ಸ್ಟೆಪ್ ಹಾಕಿದ ಯುವಕರು

author img

By

Published : Oct 5, 2022, 6:02 PM IST

Updated : Oct 5, 2022, 8:44 PM IST

ದಾವಣಗೆರೆಯಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ವೀರ್ ಸಾವರ್ಕರ್ ಫ್ಲೆಕ್ಸ್ ರಾರಾಜಿಸುತ್ತಿತ್ತು, ಇದಲ್ಲದೇ ಪರೇಶ್ ಮೆಸ್ತಾ, ಹರ್ಷ ಹಿಂದೂ, ರುದ್ರೇಶ್ ಶಿವಾಜಿ ನಗರ, ಪ್ರವೀಣ್ ನೆಟ್ಟಾರ್ ಹೀಗೆ ಮೃತ ಹಿಂದೂ ಕಾರ್ಯಕರ್ತರ ಫ್ಲೆಕ್ಸ್ ಅಳವಡಿಕೆ ಮಾಡಿ ಮೆರವಣಿಗೆ ಮಾಡಲಾಗಿತ್ತು.

Grand drive for Vijayadashami Shobhayatra in Davanagere

ದಾವಣಗೆರೆ: ವಿಜಯದಶಮಿ ಹಬ್ಬದ ಪ್ರಯುಕ್ತ ಹಿಂದೂ ಪರ ಸಂಘಗಳ ನೇತೃತ್ವದಲ್ಲಿ ಶೋಭಯಾತ್ರೆಗೆ ಅದ್ಧೂರಿ ಚಾಲನೆ ದೊರೆತಿದೆ. ಸಂಸದ ಜಿಎಂ ಸಿದ್ದೇಶ್ವರ್ ಈ ಶೋಭಾಯಾತ್ರೆಗೆ ಚಾಲನೆ ನೀಡಿದರು. ದಾವಣಗೆರೆ ನಗರದ ವೆಂಕಟೇಶ್ವರ ವೃತ್ತದಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿ ಡಿಜೆ‌ ಸದ್ದಿಗೆ ಸಖತ್ ಹೆಜ್ಜೆ ಹಾಕಿದ್ದಾರೆ.

ಇನ್ನು ಕೆಲವರು ಭಗವಾಧ್ವಜ ಹಿಡಿದು ವಿಠಲ ವಿಠಲ ಹಾಡಿಗೆ ಭರ್ಜರಿ ಸ್ಡೆಪ್ ಹಾಕಿದರು. ಇನ್ನು ಶೋಭಾಯಾತ್ರೆಯಲ್ಲಿ ವೀರ್ ಸಾವರ್ಕರ್ ಫ್ಲೆಕ್ಸ್ ರಾರಾಜಿಸುತ್ತಿತ್ತು, ಇದಲ್ಲದೇ ಪರೇಶ್ ಮೆಸ್ತಾ, ಹರ್ಷ ಹಿಂದೂ, ರುದ್ರೇಶ್ ಶಿವಾಜಿ ನಗರ, ಪ್ರವೀಣ್ ನೆಟ್ಟಾರು ಹೀಗೆ ಮೃತ ಹಿಂದೂ ಕಾರ್ಯಕರ್ತರ ಫ್ಲೆಕ್ಸ್ ಅಳವಡಿಕೆ ಮಾಡಿ ಮೆರವಣಿಗೆ ಮಾಡಲಾಗಿತ್ತು.

ವಿಜಯದಶಮಿ ಶೋಭಾಯಾತ್ರೆಗೆ ಅದ್ಧೂರಿ ಚಾಲನೆ

ಈ ಶೋಭಾಯಾತ್ರೆ ವೆಂಕಟೇಶ್ವರ ವೃತ್ತದಿಂದ ಆರಂಭವಾಗಿದ್ದು, ಬಂಬೂಬಜಾರ್, ಗಣೇಶ್ ಗುಡಿ, ಹಂಸಬಾವಿ ವೃತ್ತ ಸಾಗಿ ಕೆಆರ್ ಮಾರ್ಕೇಟ್ ತಲುಪಿ ಪಿ ಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಾಲಯದ ಬಳಿಯಲ್ಲಿ ಅಂಬು ಛೇದನ ಮಾಡುವ ಮೂಲಕ ಶೋಭಯಾತ್ರೆ ಕೊನೆಗೊಳ್ಳುತ್ತದೆ.

ಇದನ್ನೂ ಓದಿ : ಹುಲಿವೇಷ ಕುಣಿತಕ್ಕೆ ಸ್ಟೆಪ್ ಹಾಕಿದ ಯುವತಿಯರು - ವಿಡಿಯೋ ವೈರಲ್ ಮಂಗಳೂರಿನಲ್ಲಿ ಹುಲಿ ನೃತ್ಯ ಮಾಡಿದ ಯುವತಿಯರು

Last Updated : Oct 5, 2022, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.