ETV Bharat / state

ಗೂಡ್ಸ್ ಆಟೋ ಪಲ್ಟಿ: ಓರ್ವ ಸ್ಥಳದಲ್ಲೇ ಸಾವು - Hebbal toll gate of National Highway 4

ಗೂಡ್ಸ್ ಆಟೋ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ದಾವಣಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಹೆಬ್ಬಾಳ ಟೋಲ್ ಗೇಟ್ ಬಳಿ ನಡೆದಿದೆ.

dwdde
ಗೂಡ್ಸ್ ಆಟೋ ಪಲ್ಟಿ:ಓರ್ವ ಸ್ಥಳದಲ್ಲೇ ಸಾವು
author img

By

Published : Mar 3, 2020, 9:34 PM IST

ದಾವಣಗೆರೆ: ಗೂಡ್ಸ್ ಆಟೋ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ದಾವಣಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಹೆಬ್ಬಾಳ ಟೋಲ್ ಗೇಟ್ ಬಳಿ ನಡೆದಿದೆ.

ಜಗಳೂರು ತಾಲೂಕಿನ ಮುಸ್ತಾಳಗುಮ್ಮಿಯ ಮಹಾಂತೇಶ ಬೊಮ್ಮಣ್ಣ(30) ಮೃತಪಟ್ಟ ವ್ಯಕ್ತಿ. ದಾವಣಗೆರೆ ಜಾತ್ರೆ ಹಿನ್ನೆಲೆ ಜಗಳೂರಿನಿಂದ‌ ನಗರದ ಕುಂದವಾಡಕ್ಕೆ ಕುರಿ ತರಲೆಂದು ಗುರುಸ್ವಾಮಿ, ಮಹಾಂತೇಶ ಬೊಮ್ಮಣ್ಣ ಮತ್ತವರ ಗೆಳೆಯ ಹೋಗುತ್ತಿದ್ದರು.

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಆಟೋ ಮಹಾಂತೇಶ ಮೇಲೆಯೇ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡು ಮಹಾಂತೇಶ್ ಸ್ಥಳದಲ್ಲೇ ಅಸುನೀಗಿದ್ದಾನೆ. ಇನ್ನಿಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.