ETV Bharat / state

ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ದಾವಣಗೆರೆ ಪೊಲೀಸರು - ನಕಲಿ ಚಿನ್ನದ ನಾಣ್ಯ

ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಖದೀಮರನ್ನು ದಾವಣಗೆರೆಯ ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

davangere
ದಾವಣಗೆರೆ
author img

By

Published : Sep 14, 2021, 8:41 AM IST

ದಾವಣಗೆರೆ: ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ ಮಹಾರಾಷ್ಟ್ರ ಮೂಲದ 3 ಜನ ಆರೋಪಿಗಳನ್ನು ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಹೊನ್ನಾಳಿ ಪಟ್ಟಣದಲ್ಲಿರುವ ಬಟ್ಟೆ ಅಂಗಡಿ ಮಾಲೀಕ ನರಪತ್ ಸಿಂಗ್ ಶಾಪ್​ಗೆ ಆಗಮಿಸಿದ ಖದೀಮರು,"ಪೈಪ್​ಲೈನ್ ಕೆಲಸ ಮಾಡುವ ವೇಳೆ ಗಡಿಗೆಯಲ್ಲಿ ಒಂದು ಕೆಜಿ ಚಿನ್ನದ ಬಿಲ್ಲೆಗಳು ಸಿಕ್ಕಿವೆ. ನಿಮಗೆ ಕಡಿಮೆ ಬೆಲೆಯಲ್ಲಿ ನೀಡುತ್ತೇವೆ" ಎಂದು ನಕಲಿ ಚಿನ್ನವನ್ನು ನೀಡಿ ಬರೋಬ್ಬರಿ 5 ಲಕ್ಷ ರೂ. ವಂಚನೆ ಮಾಡಿದ್ದಾರೆ. ಆದರೆ, ಅದು ನಕಲಿ ಎಂದು ತಿಳಿದಾಗ ನರಪತ್ ಸಿಂಗ್ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಯಪ್ರವೃತರಾದ ಪಿಎಸ್ಐ ಅಬ್ದುಲ್ ಖಾದರ್ ಜೀಲಾನಿ ಹಾಗೂ ತಂಡ ಮೂವರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಆರೋಪಿಗಳಿಂದ 4 ಲಕ್ಷ ರೂ ನಗದು ಮತ್ತು 1 ಕೆಜಿ ನಕಲಿ ಬಂಗಾರದ ಬಿಲ್ಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.