ದಾವಣಗೆರೆ: ದೇಶದ ಒಟ್ಟು ಭಾಷೆಗಳಲ್ಲಿ ಬಂಜಾರ ಭಾಷೆ ಬಹಳ ವಿಭಿನ್ನವಾಗಿದೆ. ಏಕ ಪದಗಳು ಹೆಚ್ಚು ಲಂಬಾಣಿ ಭಾಷೆಯಲ್ಲಿದ್ದರಿಂದ ಬಂಜಾರ ಭಾಷಾ ಅಕಾಡೆಮಿ ಸ್ಥಾಪನೆಯಾಗಬೇಕೆಂಬ ಬೇಡಿಕೆ ಇತ್ತು. ಅದು ಇದೀಗ ಕರ್ನಾಟಕದಲ್ಲಿ ಸ್ಥಾಪನೆಯಾಗಿದ್ದು, ಇದಕ್ಕೆ ಶ್ರಮಿಸಿದವರಿಗೆ ಹಾಗೂ ಸಿಎಂ ಯಡಿಯೂರಪ್ಪ ನವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ರಾಜೀವ್ ಅಭಿನಂದಿಸಿದರು.
ಓದಿ: ದಿಕ್ಕು ತಪ್ಪಿಸುವ ಕಾರ್ಯಕ್ರಮವಲ್ಲ, ಒಟ್ಟಿಗೆ ಹೋಗುವ ಕಾರ್ಯಕ್ರಮ: ದಿಂಗಾಲೇಶ್ವರ ಶ್ರೀ
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಬಂಜಾರ ಭಾಷೆ 08ನೇ ಅನುಚ್ಛೇದ ಭಾರತ ಸಂವಿಧಾನದಲ್ಲಿ ಸೇರಿಸಬೇಕೆಂಬ ಬಹುದೊಡ್ಡ ಬೇಡಿಕೆ ಇದ್ದು, ಅದು ಈಡೇರಬೇಕಾಗಿದೆ. ಇನ್ನು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದು, ಬಂಜಾರ ಸಮುದಾಯವಾಗಿದೆ.
ನಾಳೆ ಸೂರಗೊಂಡನ ಕೊಪ್ಪದಲ್ಲಿ ನಡೆಯುವ ಸಂತ ಸೇವಾಲಾಲ್ ಕಾರ್ಯಕ್ರಮದಲ್ಲಿ ಈ ಸಮಾಜದ ಏಳಿಗೆಗಾಗಿ ಸಿಎಂ ಏನಾದರೂ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಸೇವಾಲಾಲ್ ಜನ್ಮ ಸ್ಥಳಕ್ಕೆ ಸಿಎಂ ಭೇಟಿ: ಶಾಸಕ ರೇಣುಕಚಾರ್ಯ
ಸಂತ ಸೇವಾಲಾಲ್ 282ನೇ ಜಯಂತಿಯನ್ನು ಸೇವಾಲಾಲ್ ಜನ್ಮ ಸ್ಥಳವಾಗಿರುವ ಸೂರಗೊಂಡನಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಕೂಡ ಭಾಗಿಯಾಗಲಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತಿಳಿಸಿದರು.
ಬಂಜಾರ ಅಭಿವೃದ್ಧಿ ನಿಗಮ ಹಾಗೂ ಸೇವಾಲಾಲ್ ಮಠ್ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದು, ಕುಡಚಿ ಶಾಸಕ ರಾಜೀವ್ ರವರ ನೇತೃತ್ವದ ತಂಡ ಕೆಲಸ ನಡೆಯುತ್ತಿದೆ.
ಇನ್ನು ಪೂಜಾ ವಿಧಿವಿಧಾನ ಕಾರ್ಯಕ್ರಮಗಳು ಮಾಜಿ ಸಚಿವ ರುದ್ರಪ್ಪ ಲಮಾಣಿಯವರ ನೇತೃತ್ವದಲ್ಲಿ ನಡೆಯಲ್ಲಿದ್ದು, ಚುನಾಯಿತ ಪ್ರತಿನಿಧಿಗಳಲ್ಲದೆ ಸೇವಕರಾಗಿ ನಾಳೆ ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂದರು.