ದಾವಣಗೆರೆ: ಅನುಮಾನಾಸ್ಪದ ರೀತಿಯಲ್ಲಿ ಯುವಕನೋರ್ವವ ಶವ ಪತ್ತೆಯಾಗಿರುವ ಘಟನೆ ನಗರದ ಡಿಸಿಎಂ ಟೌನ್ಶಿಪ್ ಬಳಿಯ ರೈಲ್ವೆ ಹಳಿ ಬಳಿ ನಡೆದಿದೆ.
ಕೆಟಿಜೆ ನಗರದ ನಿವಾಸಿ ಸಾಗರ್ (18) ಮೃತ ಯುವಕನಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ದೇಹದ ಬಹುತೇಕ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು ಯಾರೋ ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿರಬಹುದು ಎನ್ನಲಾಗುತ್ತಿದೆ. ಮೃತ ಸಾಗರ್ ಪಿಯುಸಿ ಓದುತ್ತಿದ್ದನು. ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.