ETV Bharat / state

ಬೆಣ್ಣೆನಗರಿಯಲ್ಲಿ ಸ್ವ ಇಚ್ಛೆಯಿಂದ ಜೈನ ದೀಕ್ಷೆ ಪಡೆದ 24ರ ಯುವತಿ - ಜೈನ ದೀಕ್ಷೆ ಪಡೆದ 24ರ ಯುವತಿ

ಬೆಣ್ಣೆನಗರಿಯಲ್ಲಿ 24ರ ಯುವತಿಯೋರ್ವಳು ಸ್ವಯಂ ಪ್ರೇರಣೆಯಿಂದ ಜೈನ ಧರ್ಮದ ದೀಕ್ಷೆ ಪಡೆದಿದ್ದಾಳೆ.

ಬೆಣ್ಣೆನಗರಿಯಲ್ಲಿ ಸ್ವಯಂ ಇಚ್ಚೆಯಿಂದ ಜೈನ ದೀಕ್ಷೆ ಪಡೆದ 24ರ ಯುವತಿ
24 Year women become a jain monk in Davanagere
author img

By

Published : Mar 3, 2021, 2:39 PM IST

ದಾವಣಗೆರೆ: ಜೈನ ಧರ್ಮದಲ್ಲಿ ಹಿರಿಯರು ದೀಕ್ಷೆ ಪಡೆದು ಇಡೀ ‌ದೇಶ ಸಂಚರಿಸಿ ಧರ್ಮ ಪ್ರಚಾರ ಮಾಡುವುದು ಸಾಮಾನ್ಯ. ಆದರೆ ಬೆಣ್ಣೆನಗರಿಯಲ್ಲಿ 24ರ ಯುವತಿ ಜೈನ ಧರ್ಮದ ದೀಕ್ಷೆ ಪಡೆದಿದ್ದಾಳೆ.

ಬೆಣ್ಣೆನಗರಿಯಲ್ಲಿ ಸ್ವಯಂ ಇಚ್ಛೆಯಿಂದ ಜೈನ ದೀಕ್ಷೆ ಪಡೆದ 24ರ ಯುವತಿ

ನಗರದ ಚೌಕಿ ಪೇಟೆ ನಿವಾಸಿ ದೀಪಿಕಾ ಚಂಪಕ ಲಾಲ್ ದೀಕ್ಷೆ ಸ್ವೀಕರಿಸಿದ ಯುವತಿಯಾಗಿದ್ದಾಳೆ. ಈಕೆ ಅಪಾರ ಆಸ್ತಿಯನ್ನು ಹೊಂದಿದ್ದು, ಅದನ್ನೆಲ್ಲ ಬಿಟ್ಟು ಸ್ವಯಂ ಇಚ್ಛೆಯಿಂದ ನಗರದ ಹೊರವಲಯದ ಆವರಗೆರೆಯಲ್ಲಿರುವ ನಾಗೇಶ್ವರ ಪಾರ್ಶ ಮಂದಿರದಲ್ಲಿ ಜೈನ ಧರ್ಮದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸನ್ಯಾಸತ್ವ ಸ್ವೀಕರಿಸಿದಳು.

ಜೈನ ಗುರುಗಳಾದ ಮೇಘಾ ದರ್ಶನ್ ಸುದೇಶ್ವರ ಮಹಾರಾಜ್​​ ದೀಪಿಕಾರವರಿಗೆ ದೀಕ್ಷೆ ನೀಡಿದರು. ಮೈ ಮೇಲಿದ್ದ ಚಿನ್ನವನ್ನು ತ್ಯಾಗ‌ ಮಾಡಿ ಖುಷಿ ಖುಷಿಯಿಂದಲೇ ಕುಣಿಯುತ್ತಲೇ ಸನ್ಯಾಸತ್ವ ಪಡೆದರು. ದೀಪಿಕಾ ತಮ್ಮ ಧರ್ಮ ಪ್ರಚಾರಕ್ಕಾಗಿ ವರ್ಷದ 12 ತಿಂಗಳಿನಲ್ಲಿ 04 ತಿಂಗಳು ಒಂದೆಡೆ ನೆಲಸಿ, ಇನ್ನುಳಿದ 08 ತಿಂಗಳು ಧರ್ಮ ಪ್ರಚಾರ ಮಾಡಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.