ETV Bharat / state

ಬಂಟ್ವಾಳ: ಕಡಿಯುವ ವೇಳೆ ತೆಂಗಿನಮರ ಬಿದ್ದು ನವವಿವಾಹಿತ ಸಾವು

author img

By

Published : Jan 9, 2022, 6:21 PM IST

ತೆಂಗಿನಮರ ಕಡಿಯುವಾಗ ಅದು ಯತಿರಾಜ್ ಎಂಬುವರ ಮೇಲೆ ಬಿದ್ದ ಪರಿಣಾಮ ಅವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲದಲ್ಲಿ ನಡೆದಿದೆ.

Youth dies when a coconut tree falls on him
ಯುವಕ ಸಾವು

ಬಂಟ್ವಾಳ (ದಕ್ಷಿಣ ಕನ್ನಡ): ತೆಂಗಿನಮರ ಕಡಿಯುವಾಗ ಮರ ಯುವಕನೋರ್ವನ ಮೇಲೆ ಬಿದ್ದ ಪರಿಣಾಮ, ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಶಂಭೂರು ಗ್ರಾಮದ ನಾಯಿಲದಲ್ಲಿ ಸಂಭವಿಸಿದೆ.

ನಾಯಿಲ ಬೆಟ್ಟುಗದ್ದೆ ನಿವಾಸಿ ದಿ.ಪೂವಪ್ಪ ಪೂಜಾರಿ ಅವರ ಪುತ್ರ ಯತಿರಾಜ್(37) ಮೃತಪಟ್ಟ ಯುವಕ. ಸ್ಥಳೀಯ ಕೃಷಿಕರೋರ್ವರ ತೋಟದಲ್ಲಿ ತೆಂಗಿನಮರ ಕಡಿಯುವ ವೇಳೆ ಈ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್​ ಮಾರಾಟ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಅರೆಸ್ಟ್

ತಕ್ಷಣ ಯತಿರಾಜ್​ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆದಾಗಲೇ ಮೃತಪಟ್ಟಿದ್ದರು. ಯತಿರಾಜ್​ಗೆ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಅವರು ಮರ ಕಡಿಯುವ ಕೆಲಸದ ಗುತ್ತಿಗೆ ವಹಿಸುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.