ಮಂಗಳೂರು: ಮೂಡಬಿದಿರೆ ಪಟ್ಟಣದ ಒಂಟಿಕಟ್ಟೆ ಬಳಿಯಬ ತೆರೆದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಇಲ್ಲಿನ ಕಿನ್ನಿಗೋಳಿಯ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಮೃತ ಯುವಕನಾಗಿದ್ದಾನೆ. ನಿನ್ನೆ (ಡಿ. 25) ರಾತ್ರಿ ಸ್ನೇಹಿತರ ಜೊತೆ ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ನೋಡಲು ಸ್ನೇಹಿತರೊಂದಿಗೆ ತೆರಳಿದ್ದ. ಆದರೆ, ಬೆಳಗ್ಗೆ ಒಂಟಿಕಟ್ಟೆಯಲ್ಲಿರುವ ತೆರೆದ ಬಾವಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.