ETV Bharat / state

ಯೂಟ್ಯೂಬ್‍ನಲ್ಲಿ ಯಕ್ಷಗಾನ ಲೈವ್: ಲಕ್ಷಗಟ್ಟಲೆ ವೀಕ್ಷಣೆ ಗಳಿಸಿ ಮೆಚ್ಚುಗೆ ಪಡೆದ ಧರ್ಮಸ್ಥಳ ಯಕ್ಷಗಾನ ಬಳಗ - ಧರ್ಮಸ್ಥಳ ಇತ್ತೀಚಿನ ಸುದ್ದಿ

ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಯಕ್ಷಗಾನವನ್ನು ಯುಟ್ಯೂಬ್​ ಮೂಲಕ ಸುಮಾರು 1.55 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿ ದಾಖಲೆ ನಿರ್ಮಿಸಿದ್ದಾರೆ.

ಯೂಟ್ಯೂಬ್​ನಲ್ಲಿ ಯಕ್ಷಗಾನ ಪ್ರದರ್ಶನದ ಲೈವ್​
ಯೂಟ್ಯೂಬ್​ನಲ್ಲಿ ಯಕ್ಷಗಾನ ಪ್ರದರ್ಶನದ ಲೈವ್​
author img

By

Published : Nov 27, 2020, 4:50 PM IST

ಬೆಳ್ತಂಗಡಿ(ಮಂಗಳೂರು): ಸಮಯೋಚಿತವಾಗಿ ತನ್ನ ಯಕ್ಷಗಾನ ಮಂಡಳಿಯಲ್ಲಿ ಹೊಸ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಯಕ್ಷಗಾನವನ್ನು ಕೆಲವೇ ದಿನಗಳಲ್ಲಿ 1.55 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿ ದಾಖಲೆ ನಿರ್ಮಿಸಿದ್ದಾರೆ. ಯಕ್ಷಗಾನ ವೀಕ್ಷಣೆ ಅಂಗೈಗೆ ತಲುಪಿರುವುದರಿಂದ ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ವೀಕ್ಷಣೆಯನ್ನು ಯೂಟ್ಯೂಬ್ ಮೂಲಕ ಮಾಡುತ್ತಿದ್ದಾರೆ.

ಕೊರೊನಾ ಹಿನ್ನೆಲೆ ಧರ್ಮಸ್ಥಳದ ಯಕ್ಷಗಾನ ಮಂಡಳಿ ಕ್ಷೇತ್ರದಲ್ಲೇ ಒಂದು ತಿಂಗಳ ಕಾಲ ಸೇವಾಕರ್ತರ ನೆರವಿನೊಂದಿಗೆ ಕ್ಷೇತ್ರದಲ್ಲಿಯೇ ಪ್ರದರ್ಶನ ನೀಡಲಿದೆ ಎಂದು ಮೇಳದ ಅಧ್ಯಕ್ಷ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ 53ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ದಿನ ಅ.25ರಂದು ತಿಳಿಸಿದ್ದರು. ಅಂತೆಯೇ ಧರ್ಮಸ್ಥಳದ ಅಮೃತ ಮಹೋತ್ಸವ ಸಭಾಂಗಣದ ಬಳಿ ವೇದಿಕೆ ಹಾಕಿ, ನ.19ರಿಂದ ಮೇಳದ ಯಕ್ಷಗಾನ ಪ್ರದರ್ಶನವನ್ನು ಸಂಜೆ 7ರಿಂದ 12ರವರೆಗೆ ನಡೆಸಲಾಗುತ್ತಿದೆ. ಒಂದು ತಿಂಗಳ ಕಾಲ ಇಲ್ಲಿಯೇ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ. ಆದರೆ, ಪ್ರೇಕ್ಷಕರು ವೇದಿಕೆ ಮುಂಭಾಗ ಸೇರುವಂತಿಲ್ಲ ಎಂದು ಮೊದಲೇ ತಿಳಿಸಲಾಗಿತ್ತು.

ಯೂಟ್ಯೂಬ್​ನಲ್ಲಿ ಯಕ್ಷಗಾನ ಪ್ರದರ್ಶನದ ಲೈವ್​

ಯೂಟ್ಯೂಬ್‍ನಲ್ಲಿ ವೀಕ್ಷಣೆಗೆ ಅವಕಾಶ: ಧರ್ಮಸ್ಥಳ ಮೇಳದ ಯಕ್ಷಗಾನ ಹೊರಜಗತ್ತಿಗೂ ವೀಕ್ಷಣೆ ಮಾಡಲು ಸಾಧ್ಯವಾಗಬೇಕು ಎಂಬ ದೃಷ್ಟಿಯಿಂದ ಕ್ಷೇತ್ರದ ಯೂಟ್ಯೂಬ್ ಚಾನಲ್ 'ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ' ಮೂಲಕ ಲೈವ್ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನದ ಮಾಹಿತಿ ನೀಡಲಾಗುತ್ತಿತ್ತು. ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಒಟ್ಟು 8 ದಿನಗಳಿಂದ ಯೂಟ್ಯೂಬ್ ಲೈವ್ ನಡೆಯುತ್ತಿದ್ದು, ಸುಮಾರು 1.50 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ನಡೆಸಿದ್ದಾರೆ. ಸರಾಸರಿ ಗಮನಿಸಿದರೆ ನಿತ್ಯ 27 ಸಾವಿರ ಮಂದಿ ಯೂಟ್ಯೂಬ್ ಮೂಲಕ ಧರ್ಮಸ್ಥಳ ಮೇಳದ ಯಕ್ಷಗಾನ ವೀಕ್ಷಿಸುತ್ತಿದ್ದಾರೆ. ಅದಲ್ಲದೇ ವಿದೇಶದಲ್ಲೂ ಅತೀ ಹೆಚ್ಚು ಜನ ಯಕ್ಷಗಾನವನ್ನು ವೀಕ್ಷಣೆ ಮಾಡುತಿದ್ದಾರೆ.

ಕೆಲವು ಪ್ರದೇಶಗಳ ಸೇವಾಕರ್ತರು ತಮ್ಮ ಸೇವಾ ಪ್ರದರ್ಶನಗಳನ್ನು ಧರ್ಮಸ್ಥಳದಲ್ಲಿಯೇ ನಡೆಸಿದ್ದಾರೆ. ಆದರೆ, ವೀಕ್ಷಣೆಗೆ ಯೂಟ್ಯೂಬ್ ಮಾಧ್ಯಮ ಬಳಸಿಕೊಂಡಿರುವುದರಿಂದ ತಮ್ಮ ಊರಿನವರೂ ಸುಲಭವಾಗಿ ವೀಕ್ಷಣೆ ಮಾಡಲು ಸಹಾಯಕವಾಗಿದೆ. ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ಡಿ. ಹರ್ಷೇಂದ್ರ ಕುಮಾರ್ ಅವರು ತಿಳಿಸುವಂತೆ, ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ನೇರಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶ, ವಿದೇಶಗಳ ವೀಕ್ಷಕರೂ ನೇರವಾಗಿ ಧರ್ಮಸ್ಥಳದಿಂದ ಪ್ರದರ್ಶನವನ್ನು ವೀಕ್ಷಿಸುವಂತಾಗಿದೆ. ಕ್ಷೇತ್ರದಲ್ಲಿ ಯಕ್ಷಗಾನ ನಡೆಯುವಷ್ಟು ದಿನ ಲೈವ್ ಮಾಡಲಾಗುವುದು ಎಂದಿದ್ದಾರೆ.

ವ್ಯಾಪ್ತಿ ವಿಸ್ತರಣೆ: ಯಕ್ಷಗಾನ ತಿರುಗಾಟದ ಸಂದರ್ಭ ಸೀಮಿತ ಜನರನ್ನು ತಲುಪುತ್ತಿದ್ದ ಯಕ್ಷಗಾನ ಇದೀಗ ವಿಶ್ವವ್ಯಾಪಿಯಾಗಿ, ಲಕ್ಷಾಂತರ ಜನರನ್ನು ಏಕ ಕಾಲದಲ್ಲಿ ತಲುಪುವಂತಾಗಿದೆ. ಧರ್ಮಸ್ಥಳದ ಲೈವ್ ಪ್ರಸಾರಕ್ಕೆ ಯಕ್ಷ ಪ್ರೇಮಿಗಳೂ ಹರ್ಷ ವ್ಯಕ್ತಪಡಿಸಿದ್ದಾರೆ. ಲೈವ್ ಯಕ್ಷಗಾನದ ಕುರಿತು ಮೇಳದ ಯಜಮಾನ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಹುಟ್ಟುಹಬ್ಬದ ದಿನ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, "ಯೂಟ್ಯೂಬ್ ಲೈವ್ ಮೂಲಕ ಯಕ್ಷಗಾನ ಪ್ರದರ್ಶನದ ಪ್ರಯೋಗ ನಡೆಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪರಿವರ್ತನೆಯಿಂದ ಜನ ದೂರ ಇದ್ದರೂ, ಹೆಚ್ಚು ಜನರನ್ನು ತಲುಪುವಂತಾಗಿದೆ" ಎಂದು ಈ ಧನಾತ್ಮಕ ಬೆಳವಣಿಗೆಯ ಕುರಿತು ಸಂತಸ ವ್ಯಕ್ತಪಡಿಸಿದ್ದರು.

ಮೇಳದ ಮನೋರಂಜನಾತ್ಮಕ ಅಂಶ ಉಳಿಸಿಕೊಂಡು ಪ್ರಯೋಗ ಯಶಸ್ವಿಯಾಯಿತು. ಸಂಜೆ 7.00 ರಿಂದ ಮಧ್ಯರಾತ್ರಿ 12.00 ರವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಜನರಿಗೂ ಇಷ್ಟವಾಯಿತು. ಈ ಮೂಲಕ ಯಕ್ಷಗಾನಕ್ಕೆ ಕಾಲಮಿತಿ ಅಳವಡಿಕೆ ಮಾಡಿ ಮನೋರಂಜನೆಯ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕ ಸಂದೇಶಗಳನ್ನು ತಲುಪಿಸುವ ಪ್ರಯತ್ನ ಯಶಸ್ವಿಯಾಗಿದೆ.

ಹೀಗೆ ಸುಮಾರು 200 ವರ್ಷಗಳ ಇತಿಹಾಸವಿರುವ 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ' ತನ್ನ ಸಮಯೋಚಿತ ಬದಲಾವಣೆಗಳು ಜನರನ್ನು ತಲುಪಲು ಪರಿಣಾಮಕಾರಿ ಬದಲಾವಣೆಗಳನ್ನು ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.