ಮಂಗಳೂರು: ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆಯಲ್ಲಿರುವ ಮಾಜಿ ಸಚಿವ ಯು.ಟಿ. ಖಾದರ್ ಬಂಟ್ವಾಳದಲ್ಲಿ ಕಾರು ಹೋಗಲು ಅಸಾಧ್ಯವಾದ ಕಡೆಗಳಿಗೆ ಜೀಪ್ ಏರಿ ತಾನೇ ಚಲಾಯಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಯು.ಟಿ. ಖಾದರ್ ಅವರು ಕೆಲವು ದಿನಗಳಿಂದ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ಸಾಂತ್ವನ ಹೇಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಬಂಟ್ವಾಳ ತಾಲೂಕಿನ ವಿವಿಧ ರಸ್ತೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರವಾಹದಿಂದ ರಸ್ತೆ ಹಾನಿಗೊಂಡ ಸ್ಥಳಗಳಲ್ಲಿ ಕಾರು ಚಲಾಯಿಸಲು ಸಾಧ್ಯವಾಗದ ಕಡೆಗೆ ತಾನೇ ಜೀಪ್ ಚಲಾಯಿಸಿ ಪರಿಶೀಲನೆ ನಡೆಸಿ ಮೆಚ್ಚುಗೆಗೆ ಪಾತ್ರರಾದರು.