ಕಡಬ: ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು, ಎರಡು ಕರುಗಳನ್ನು ರಕ್ಷಣೆ ಮಾಡಿ, ಓರ್ವನನ್ನು ಬಂಧಿಸಿದ್ದಾರೆ.
ಇಲಿಯಾಸ್ (33) ಬಂಧಿತ ಆರೋಪಿ. ಈತ ತಾಲೂಕಿನ ಕೊಯಿಲ ಸಮೀಪದ ಬಡ್ಡಮ್ಮೆ ಎಂಬಲ್ಲಿ ಮರಿಯಮ್ಮ ಎಂಬುವರ ಮನೆಯ ಹಿಂದಿನ ಅಂಗಳದಲ್ಲಿ ದನದ ಮಾಂಸ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ಮಾಡಿದ್ದಾರೆ.
ಈ ವೇಳೆ, ಸ್ಥಳದಲ್ಲಿ ಸುಮಾರು 70 ಕೆಜಿಯಷ್ಟು ದನದ ಮಾಂಸ ಹಾಗೂ ಎರಡು ಕರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.