ಮಂಗಳೂರು: ಕಾರು ಕಳವು ಪ್ರಕರಣ ನಡೆದು 25 ವರ್ಷಗಳ ಬಳಿಕ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಆರೆನಹಳ್ಳಿ ನಿವಾಸಿ ಅಸ್ಲಂ ಪಾಷಾ ಬಂಧಿತನಾಗಿದ್ದು ಈತ 1997ರಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಯಾಗಿದ್ದಾನೆ.
ಅಸ್ಲಾಂ ಪಾಷಾ, 1997ರ ನವೆಂಬರ್ 11ರಂದು ಅಂಬಾಸಿಡರ್ ಕಾರು ಕಳವು ಮಾಡಿದ್ದಾನೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆದರೆ ಜಾಮೀನು ಪಡೆದ ಬಳಿಕ 2000 ಫೆಬ್ರವರಿ 8 ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗೆ 25 ವರ್ಷಗಳು ಕಳೆದಿದ್ದವು.
ಇತ್ತೀಚೆಗೆ ಸೆಪ್ಟೆಂಬರ್ 12ರಂದು ಈತನನ್ನು ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿ ಸಾವು