ETV Bharat / state

ನವೆಂಬರ್ 8 ರಿಂದ ಮಂಗಳೂರು ವಿವಿಯಲ್ಲಿ ಎನ್​ಇಪಿ ಅಧಿಕೃತ ಅನುಷ್ಠಾನ: ಕುಲಪತಿ - ರಾಷ್ಟ್ರೀಯ ಶಿಕ್ಷಣ ನೀತಿ

ಸರ್ಕಾರದ ಸೂಚನೆ ಮೇರೆಗೆ ರಚಿಸಿದ್ದ ಸಮಿತಿ ನೀಡಿರುವ ವರದಿಯಾಧರಿಸಿ ನವೆಂಬರ್​​ 8 ರಿಂದ ಮಂಗಳೂರು ವಿವಿಯಲ್ಲಿ ಎನ್​ಇಪಿಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗುವುದು ಅಂತಾ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

Chanceller Dr. P.S.Yadapadittaya
ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ
author img

By

Published : Oct 28, 2021, 9:38 AM IST

ಮಂಗಳೂರು: ನವೆಂಬರ್ 8 ರಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. 2021-22ನೇ ಸಾಲಿನಲ್ಲಿ ವಿವಿಗಳಲ್ಲಿ ಎನ್​ಇಪಿ ಜಾರಿಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಆ ಸಮಿತಿ ನೀಡರುವ ವರದಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎನ್​ಇಪಿ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಗುಣಮಟ್ಟ ಪಾಲನೆಗಾಗಿ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ನೇತೃತ್ವದಲ್ಲಿ ಸಮಿತಿ ರಚಿಸಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಆಗಸ್ಟ್ 2018 ರಲ್ಲಿ ನಿರಪೇಕ್ಷಣಾ ಪತ್ರದ ಮೂಲಕ ಅದಕ್ಕೆ ಅನುಮತಿ ದೊರೆತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಭವಿಷ್ಯ ರೂಪಿಸುವ ಪಠ್ಯಕ್ರಮ, ಬೋಧನಾ ಶೈಲಿಯಲ್ಲಿ ಬದಲಾವಣೆ ಬಗ್ಗೆ ಪ್ರತಿಪಾದಿಸಿದೆ ಎಂದರು.

ಅದನ್ನೇ ಮಾದರಿಯನ್ನಾಗಿಸಿ ಪಠ್ಯಕ್ರಮಗಳನ್ನು ರೂಪಿಸಲಾಗಿದೆ. ಪಠ್ಯಕ್ರಮ ರೂಪಿಸಲು 48 ಬೋರ್ಡ್‌ಗಳಿದ್ದು, ಹತ್ತು ಬೋರ್ಡ್​​ಗಳು ಪಠ್ಯಕ್ರಮ ನೀಡಿದ್ದರೂ ಎನ್‌ಇಪಿ-2020 ಕ್ಕೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳ ಅಗತ್ಯವಿದೆ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿಲ್ಲ. ಆದರೂ, ವಾರದೊಳಗೆ ಪಠ್ಯಕ್ರಮ ರೂಪಿಸುವುದು ಮತ್ತು 41 ವಿಷಯದಲ್ಲೂ ಪಠ್ಯಕ್ರಮ ಅಳವಡಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ: ಪ್ರಭು ಚವ್ಹಾಣ ಹರ್ಷ

ಶೈಕ್ಷಣಿಕ ಮಂಡಳಿ ಸಾಮಾನ್ಯ ಸಭೆಯಲ್ಲಿ ಕುಲಸಚಿವ (ಆಡಳಿತ) ಡಾ.ಕಿಶೋರ್ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ಪ್ರೊ.ಬಿ. ನಾರಾಯಣ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.