ETV Bharat / state

ಉಳ್ಳಾಲ: ಸಮುದ್ರ ಸ್ನಾನಕ್ಕಿಳಿದ ವ್ಯಕ್ತಿ ನೀರುಪಾಲು

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ತೀವ್ರಗೊಂಡು ಚಂಡಾಮಾರುತವಾಗಿ ಮಾರ್ಪಟ್ಟು, ಡಿ.12 ರವರೆಗೆ ಚಳಿ ಜತೆಗೆ ಮಳೆ ಇರುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿತ್ತು. ಆದರೆ ಇವರೆಲ್ಲರು ತೆರಳಿದ್ದರು ಈ ಸಂದರ್ಭ ಸಮುದ್ರದಲ್ಲಿ ಗಾಳಿಯಿದ್ದ ಹಿನ್ನೆಲೆಯಲ್ಲಿ ಅಲೆಗಳ ಗಾತ್ರ ಹೆಚ್ಚಾಗಿ ಘಟನೆ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Ambika Road resident Prashant Baikal
ಅಂಬಿಕಾ ರೋಡ್ ನಿವಾಸಿ ಪ್ರಶಾಂತ್ ಬೇಕಲ್
author img

By

Published : Dec 11, 2022, 7:44 PM IST

ಉಳ್ಳಾಲ(ದಕ್ಷಿಣ ಕನ್ನಡ): ಸಮುದ್ರ ಸ್ನಾನಕ್ಕೆ ತೆರಳಿದ ವ್ಯಕ್ತಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಸಮುದ್ರತೀರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಅಂಬಿಕಾ ರೋಡ್ ನಿವಾಸಿ ಪ್ರಶಾಂತ್ ಬೇಕಲ್ (47) ಮೃತರು.

ಮೃತ ಪ್ರಶಾಂತ್ ಬೇಕಲ್, ಪುತ್ರ ಚಿರಾಯು ಬೇಕಲ್, ಸಹೋದರ ವರದರಾಜ್ ಬೇಕಲ್ ಅವರ ಪುತ್ರ ವಂದನ್ ಬೇಕಲ್, ಸಂಕೋಳಿಗೆಯ ಸ್ನೇಹಿತ ಮಣಿ ಎಂಬವರ ಜೊತೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಪ್ರತಿ ಭಾನುವಾರವೂ ಮಕ್ಕಳನ್ನು ಕರೆದುಕೊಂಡು ಸಮುದ್ರ ತೀರಕ್ಕೆ ಸಹೋದರರು ತೆರಳುತ್ತಿದ್ದರು.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ತೀವ್ರಗೊಂಡು ಚಂಡಾಮಾರುತವಾಗಿ ಮಾರ್ಪಟ್ಟು, ಡಿ.12 ರವರೆಗೆ ಚಳಿ ಜತೆಗೆ ಮಳೆ ಇರುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿತ್ತು. ಆದರೆ ಇವರೆಲ್ಲರು ತೆರಳಿದ್ದರು ಈ ಸಂದರ್ಭ ಸಮುದ್ರದಲ್ಲಿ ಗಾಳಿಯಿದ್ದ ಹಿನ್ನೆಲೆಯಲ್ಲಿ ಅಲೆಗಳ ಗಾತ್ರ ಹೆಚ್ಚಾಗಿ ಘಟನೆ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮೃತ ಪ್ರಶಾಂತ್ ಅವರ ಪುತ್ರ ಚಿರಾಯು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈಜುಪಟುವಾಗಿದ್ದಾನೆ. ಕಣ್ಣಮುಂದೆಯೇ ತಂದೆ ಸಮುದ್ರ ಪಾಲಾಗುವುದನ್ನು ಕಂಡು ಹಗ್ಗದ ಸಹಾಯದಿಂದ ಅಲೆಗಳ ನಡುವೆ ಕಾದಾಡಿ ಇತರರ ಜೊತೆಗೆ ಮೇಲಕ್ಕೆ ಎತ್ತಿದರೂ ಪ್ರಯೋಜನಕಾರಿಯಾಗಲಿಲ್ಲ.

ಪ್ರಶಾಂತ್ ಮಂಗಳೂರಿನ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಬಸ್ಸಿನಲ್ಲಿ ಚಾಲಕರಾಗಿದ್ದರು. ಈ ಹಿಂದೆ ಕೆಎಂಸಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಸದ್ಯ ಈ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಬೀದರ್​​: ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.