ETV Bharat / state

ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಗ್ರಾಪಂ ಜಾಗ ತೆರವುಗೊಳಿಸಿದ ಗ್ರಾಪಂ..

author img

By

Published : Jan 15, 2020, 7:25 PM IST

Updated : Jan 15, 2020, 9:30 PM IST

ರಾಜಕೀಯ ಪ್ರಭಾವ ಬಳಸಿಕೊಂಡು ಗ್ರಾಮ ಪಂಚಾಯತ್​​ ಜಾಗವನ್ನೇ ಒತ್ತುವರಿ ಮಾಡ್ಕೊಂಡಿದ್ದ ವ್ಯಕ್ತಿಗೆ ಕೊನೆಗೂ ಗ್ರಾಮ ಪಂಚಾಯತ್ ಬಿಸಿ ಮುಟ್ಟಿಸಿದೆ. ಒತ್ತುವರಿಯಾಗಿದ್ದ ಜಾಗ ತೆರವುಗೊಳಿಸಿ ಗ್ರಾಪಂ ತನ್ನ ವಶಕ್ಕೆ ಪಡೆದುಕೊಂಡಿದೆ.

Kutruppadi Gram Panchayat
ಗ್ರಾಮ ಪಂಚಾಯತ್

ಕುಟ್ರುಪ್ಪಾಡಿ: ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಯೊಬ್ಬರಿಂದ ಒತ್ತುವರಿಯಾಗಿದ್ದ ಗ್ರಾಮ ಪಂಚಾಯತ್​​ ಜಾಗವನ್ನ ಗ್ರಾಮ ಪಂಚಾಯತ್‌ನಿಂದ ತೆರವುಗೊಳಿಸಲಾಗಿದೆ. ಜಾಗವನ್ನು ಕುಟ್ರುಪಾಡಿ ಗ್ರಾಪಂ ದೃಢ ನಿರ್ಧಾರದಿಂದ ತನ್ನ ವಶಕ್ಕೆ ಪಡೆದಿದೆ.

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ತಾಗಿಕೊಂಡೇ ಇದ್ದ (ಸರ್ವೇ ನಂಬರ್ 122 ರಲ್ಲಿ 2(A)1 ರ ಸುಮಾರು 5.5 ಸೆಂಟ್ಸ್ ಜಾಗ) 2,500 ಚದರ ಅಡಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ದಾರಿ ಮಾಡಿಕೊಂಡಿದ್ದಲ್ಲದೇ ಗೇಟು ಅಳವಡಿಸಿ ತಡೆಗೋಡೆ ನಿರ್ಮಿಸಿದ್ದರು.

ಕೆಲ ವರ್ಷಗಳ ಹಿಂದೆ ಜಾಗವನ್ನು ಗ್ರಾಪಂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ, ಆಗ ರಾಜಕೀಯ ಒತ್ತಡ ತಂದು ತಡೆ ನೀಡಲಾಗಿತ್ತು. ಬಳಿಕ ಹಲವು ಬಾರಿ ತಡೆಗೋಡೆ ತೆರವುಗೊಳಿಸಲು ನೋಟಿಸು ನೀಡಿದರೂ ಒತ್ತುವರಿದಾರ ಕ್ಯಾರೇ ಎಂದಿರಲಿಲ್ಲ. ಆದರ, ಗ್ರಾಮ ಪಂಚಾಯತ್ ಸಭೆಯಲ್ಲಿ ಜಾಗ ಒತ್ತುವರಿ ತೆರವುಗೊಳಿಸೋದಕ್ಕೆ ಗಟ್ಟಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಜನವರಿ 13ರಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರ ಅನುಮತಿ ಪಡೆದು ಕಡಬ ಪೊಲೀಸರ ನೆರವಿನೊಂದಿಗೆ ತೆರವು ಕಾರ್ಯ ನಡೆಸಲಾಗಿದೆ.

ಸ್ವಾಧಿನ ಪಡಿಸಿಕೊಂಡ ಸ್ಥಳದಲ್ಲಿ ತಂತಿಬೇಲಿ ಅಳವಡಿಸಲಾಗಿದೆ. ಕೆಲವೇ ದಿನಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಗ್ರಾಪಂ ಪಿಡಿಒ ವಿಲ್ಪ್ರೆಡ್ ರೋಡ್ರಿಗಸ್ ತಿಳಿಸಿದ್ದಾರೆ.

Intro:pkg
Location:-ಕುಟ್ರುಪ್ಪಾಡಿ

Web lead, ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಯೊಬ್ಬರ ವಶದಲ್ಲಿದ್ದ ಪಂಚಾಯತ್ ಜಾಗವನ್ನು ಕುಟ್ರುಪಾಡಿ ಗ್ರಾ.ಪಂ ಧೃಡ ನಿರ್ಧಾರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ.Body:ವಾ/ಓ
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ತಾಗಿಕೊಂಡೇ ಇದ್ದ (ಸರ್ವೇ ನಂಬರ್ 122 ರಲ್ಲಿ 2(A)1 ರ ಸುಮಾರು 5.5 ಸೆಂಟ್ಸ್ ಜಾಗ) 2,500 ಚದರ ಅಡಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ದಾರಿ ಮಾಡಿಕೊಂಡದಲ್ಲದೆ ,ಗೇಟು ಅಳವಡಿಸಿ ತಡೆಗೋಡೆಯನ್ನೂ ನಿರ್ಮಿಸಿದ್ದರು. ಕೆಲ ವರ್ಷಗಳ ಹಿಂದೆ ಜಾಗವನ್ನು ಗ್ರಾ.ಪಂ ಸ್ವಾದಿನ ಪಡೆಯಲು ಮುಂದಾದ ವೇಳೆ ರಾಜಕೀಯ ಒತ್ತಡ ತಂದು ತಡೆ ನೀಡಲಾಗಿತ್ತು.
ಬಳಿಕ ಹಲವು ಬಾರಿ ತಡೆಗೋಡೆ ತೆರವುಗೊಳಿಸುವಂತೆ ನೋಟಿಸು ನೀಡಿದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ಜಾಗವನ್ನು ತನ್ನ ವಶಕ್ಕೆ ಪಡೆಯಬೇಕೆಂಬ ದೃಢ ನಿರ್ಧಾರ ತಳೆದ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಜನವರಿ 13 ರಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರ ಅನುಮತಿ ಪಡೆದು ಕಡಬ ಪೊಲೀಸರ ನೆರವಿನೊಂದಿಗೆ ತೆರವುಕಾರ್ಯ ನಡೆಸಲಾಗಿದೆ.
ಸ್ವಾಧಿನ ಪಡಿಸಿಕೊಂಡ ಸ್ಥಳದಲ್ಲಿ ತಂತಿಬೇಲಿ ಅಳವಡಿಸಲಾಗಿದ್ದು,ಕೆಲವೇ ದಿನಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 18 ಲಕ್ಷ ರೂ ನಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಗ್ರಾ.ಪಂ ಪಿಡಿಒ ವಿಲ್ಪ್ರೆಡ್ ರೋಡ್ರಿಗಸ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಗ್ರಾಮ ಪಂಚಾಯತ್ ತೆಗೆದುಕೊಂಡ ದೃಢ ನಿರ್ಧಾರದಿಂದಾಗಿ ಸ್ಥಳದ ಅಭಾವ ಎದುರಿಸುತ್ತಿದ್ದ ಪಂಚಾಯತ್ ಗೆ ಸೂಕ್ತ ಸ್ಥಳವೊಂದು ದೊರೆತಂತಾಗಿದೆ..
ಈಟಿವಿ ಭಾರತ ಸುಳ್ಯ.Conclusion:ಬೈಟ್ :- 1)ವಿಲ್ಫ್ರೆಡ್ ರೋಡ್ರಿಗಸ್. ಪಂಚಾಯತ್ ಅಭಿವೃದ್ದಿ ಅಧಿಕಾರಿ ಕುಟ್ರುಪ್ಪಾಡಿ.

2) ಆನಂದ ಪೂಜಾರಿ, ಉಪಾಧ್ಯಕ್ಷರು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್.

ವೀಡಿಯೋಗೆ ಹಿನ್ನಲೆ ಮ್ಯೂಸಿಕ್ ಹಾಕಿ.

Last Updated : Jan 15, 2020, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.