ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಇಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಪ್ರಕಟಿಸಿದ್ದಾರೆ.
ತುಳು ಜಾನಪದ ಕ್ಷೇತ್ರದಲ್ಲಿ ಸಂಜೀವ ಬಂಗೇರ ತಲಪಾಡಿ, ತುಳು ನಾಟಕ / ಸಿನಿಮಾ ವಿಭಾಗದಲ್ಲಿ ಕೃಷ್ಣಪ್ಪ ಉಪ್ಪೂರು, ತುಳು ಸಾಹಿತ್ಯ ವಿಭಾಗದಲ್ಲಿ ಉಲ್ಲಾಸ ಕೃಷ್ಣ ಪೈ ಪುತ್ತೂರು ಆಯ್ಕೆಯಾಗಿದ್ದಾರೆ. ಪುಸ್ತಕ ಬಹುಮಾನ ಯೋಜನೆಯಲ್ಲಿ, ಕವನ ಸಂಕಲನದಲ್ಲಿ ಯೋಗೀಶ್ ಕಾಂಚನ್ ಬೈಕಂಪಾಡಿ, ನಾಟಕ ವಿಭಾಗದಲ್ಲಿ ಅಕ್ಷತರಾಜ್ ಪೆರ್ಲ, ಅಧ್ಯಯನ ವಿಭಾಗದಲ್ಲಿ ಡಾ ಅಶೋಕ್ ಆಳ್ವ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
![karnataka-tulu-sahitya-akademi-award-2021-announced](https://etvbharatimages.akamaized.net/etvbharat/prod-images/15885191_thu.jpg)
![karnataka-tulu-sahitya-akademi-award-2021-announced](https://etvbharatimages.akamaized.net/etvbharat/prod-images/15885191_jhkjshkjh.jpg)
![karnataka-tulu-sahitya-akademi-award-2021-announced](https://etvbharatimages.akamaized.net/etvbharat/prod-images/15885191_yjhj.jpg)
2021 ನೇ ಸಾಲಿನ ವಿಶೇಷ ಪುರಸ್ಕಾರದಲ್ಲಿ ಬಾಲಪ್ರತಿಭಾ ಪುರಸ್ಕಾರ ವಿಭಾಗದಲ್ಲಿ ಕು. ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಕು. ಜೀವಿಕಾ ಶೆಟ್ಟಿ ಮುಂಬೈ( ಹೊರ ರಾಜ್ಯ), ಕು. ಸಾನ್ವಿ ಯು ಎಸ್ ಎ ( ಹೊರರಾಷ್ಟ್ರ) , ಯುವ ಸಾಧಕ ಪುರಸ್ಕಾರ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲಿಯಾನ್ ಮುಂಬೈ ( ಹೊರ ರಾಜ್ಯ), ರಮಾನಂದ ಶೆಟ್ಟಿ ( ಹೊರ ರಾಷ್ಟ್ರ), ಮಾಧ್ಯಮ ಪುರಸ್ಕಾರ ವಿಭಾಗದಲ್ಲಿ ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ, ಸಂಘಟನಾ ಪುರಸ್ಕಾರ ವಿಭಾಗದಲ್ಲಿ ಜೈ ತುಳುನಾಡು (ರಿ), ತುಳು ಕೂಟ ಫೌಂಡೇಶನ್ ನಾಲಸೋಪಾರ, ಮುಂಬೈ ( ಹೊರ ರಾಜ್ಯ), ತುಳು ಕೂಟ ಕತಾರ್ (ಹೊರ ರಾಷ್ಟ್ರ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
![karnataka-tulu-sahitya-akademi-award-2021-announced](https://etvbharatimages.akamaized.net/etvbharat/prod-images/15885191_yyy.jpg)
![karnataka-tulu-sahitya-akademi-award-2021-announced](https://etvbharatimages.akamaized.net/etvbharat/prod-images/15885191_yyyyyy.jpg)
2021 ನೇ ಸಾಲಿನ ಗೌರವ ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಪುಸ್ತಕ ಬಹುಮಾನ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ವಿಶೇಷ ಪುರಸ್ಕಾರವು ರೂ. 10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಓದಿ : ಚಿಕ್ಕ ವಯಸ್ಸಿನಲ್ಲೇ ಸಂತೋಷ್ ಅವರ ಪತ್ನಿ ವಿಧವೆಯಾದರು ಎನ್ನುವ ನೋವಿದೆ: ಕೆ.ಎಸ್. ಈಶ್ವರಪ್ಪ