ETV Bharat / state

ಕನ್ಹಯ್ಯ ಮಂಗಳೂರು ಭೇಟಿ ವಿರೋಧಿಸಿ ಪ್ರತಿಭಟನೆ: 20ಕ್ಕೂ ಹೆಚ್ಚು ಕಾರ್ಯಕರ್ತರ ವಶಕ್ಕೆ ಪಡೆದ ಪೊಲೀಸ್​

ಕನ್ಹಯ್ಯ ಕುಮಾರ್ ಮಂಗಳೂರಿಗೆ ಬಂದಿರುವುದನ್ನು ವಿರೋಧಿಸಿ, ಘೋಷಣೆ ಕೂಗಿ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಹಿಂದೂ ಸಂಘಟನೆಯ ಕಾರ್ಯಕರ್ತರು
author img

By

Published : Aug 10, 2019, 7:48 PM IST

ಮಂಗಳೂರು: ಬಿ.ವಿ.ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಯುವನಾಯಕ ಹಾಗೂ ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಡಾ.ಕನ್ಹಯ್ಯ ಕುಮಾರ್ ಜಿಲ್ಲೆಗೆ ಬಂದಿರುವುದನ್ನು ವಿರೋಧಿಸಿ, ಘೋಷಣೆ ಕೂಗಿ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಪ್ರತಿಭಟನೆಗೆ ಯತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ ಬಿ.ವಿ.ಕಕ್ಕಿಲ್ಲಾಯ ಅವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ನಗರದ ಬಲ್ಮಠದ ಬಳಿ ಇರುವ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಂತಕರಾಗಿ ಭಾಗವಹಿಸಲು ಡಾ.ಕನ್ಹಯ್ಯ ಕುಮಾರ್ ಆಗಮಿಸಿದ್ದರು. ಅವರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಎಬಿವಿಪಿ ಕಾರ್ಯಕರ್ತರಲ್ಲಿ ನಾಲ್ಕಾರು ಮಂದಿ ಸಭಾಂಗಣ ಪ್ರವೇಶಿಸಿದರು, ಈ ಸಂದರ್ಭ ಪೊಲೀಸರು ಅವರನ್ನು ತಡೆದು, ವಶಕ್ಕೆ ಪಡೆದರು.

ಸಭಾಂಗಣದ ಹೊರಗೆ ಜಮಾಯಿಸಿದ್ದ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ ಹಾಗೂ ಎಬಿವಿಪಿ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ‌.

Intro:ಮಂಗಳೂರು: ಬಿ.ವಿ.ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಯುವನಾಯಕ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಡಾ.ಕನ್ಹಯ್ಯ ಕುಮಾರ್ ಮಂಗಳೂರಿಗೆ ಬಂದಿರುವುದನ್ನು ವಿರೋಧಿಸಿ, ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ ಬಿ.ವಿ.ಕಕ್ಕಿಲ್ಲಾಯ ಅವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ನಗರದ ಮಂಗಳೂರಿನ ಬಲ್ಮಠದ ಬಳಿ ಇರುವ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಂತಕರಾಗಿ ಭಾಗವಹಿಸಲು ಡಾ.ಕನ್ಹಯ್ಯ ಕುಮಾರ್ ಆಗಮಿಸಿದ್ದರು. ಕನ್ಹಯ್ಯ ಕುಮಾರ್ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಎಬಿವಿಪಿ ಕಾರ್ಯಕರ್ತರೆನ್ನಲಾದ ನಾಲ್ಕಾರು ಮಂದಿ ಸಭಾಂಗಣ ಪ್ರವೇಶಿಸುದರು. ಈ ಸಂದರ್ಭ ಪೊಲೀಸರು ಅವರನ್ನು ತಡೆದು, ಅವರನ್ನು‌ ವಶಕ್ಕೆ ಪಡೆದರು. ಈ ಸಂದರ್ಭ ಸಭಾಂಗಣದ ಹೊರಗೆ ಜಮಾಯಿಸಿದ್ದ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ ಹಾಗೂ ಎಬಿವಿಪಿ ಕಾರ್ಯಕರ್ತರು ಕನ್ಹಯ್ಯ ಕುಮಾರ್ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಬಳಿಕ ಇವರನ್ನೂ ವಶಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ‌.

Body:ಕನ್ಹಯ್ಯ ಕುಮಾರ್ ಮಂಗಳೂರಿಗೆ ಬರುವುದನ್ನು ವಿರೋಧಿಸಿ ನಾಲ್ಕೈದು ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬರಹಗಳು ಹರಿಯಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸಭಾಂಗಣದ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತು ಮಾಡಲಾಗಿತ್ತು. ಅಲ್ಲದೆ ಕನ್ಹಯ್ಯ ಕುಮಾರ್ ಅವರನ್ನು ಪೊಲೀಸ್ ರಕ್ಷಣೆಯಲ್ಲಿಯೇ ಮಂಗಳೂರು ವಿಮಾನ ನಿಲ್ದಾಣದಿಂದ ಕರೆತರಲಾಗಿತ್ತು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.