ಉಪ್ಪಿನಂಗಡಿ: ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಪಾಜಿ ಮರಗಳನ್ನು ಕಡಿದು ಸಾಗಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಆರೋಪಿಗಳನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಕಣಿಯೂರು ಗ್ರಾಮದ ಮಲೆಂಗಲ್ಲು ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಪಾಜಿ ಮರ ಕಡಿಯುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.
ಪದ್ಮುಂಜ ನಿವಾಸಿಗಳಾದ ದಿನೇಶ್, ಉಮೇಶ್ ಗೌಡ, ಹೇಮಂತ್ ಬಂಧಿತರು. ಇವರು ಮರವನ್ನು ಯಂತ್ರದ ಮೂಲಕ ಉರುಳಿಸಿ, ಬಳಿಕ ಕಾಡಿನ ಒಳಗಡೆಯೇ ಅವುಗಳನ್ನು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ತಯಾರಿ ನಡೆಸಿಕೊಂಡಿದ್ದರು. ಆರೋಪಿಗಳಿಂದ ಮರ ಕಡಿಯುವ ಯಂತ್ರ ಮತ್ತು ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಹುಲಿಹೈದರ ಗಲಾಟೆ ಪ್ರಕರಣ.. ಪಿಐ ಸೇರಿ ನಾಲ್ವರ ಅಮಾನತು