ETV Bharat / state

ನಾಳೆ ಯುಎಇಯಿಂದ ಮಂಗಳೂರಿಗೆ ಆಗಮಿಸಲಿರುವ ಮೊದಲ ಚಾರ್ಟರ್ಡ್ ವಿಮಾನ - ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಯುಎಇಯಿಂದ ನಾಳೆ ಮಂಗಳೂರಿಗೆ ಮೊದಲ ಚಾರ್ಟರ್ಡ್ ವಿಮಾನ ಆಗಮಿಸಲಿದ್ದು, ಪ್ರಯಾಣಿಕರನ್ನು ಮಂಗಳೂರು ಹಾಗೂ ಉಡುಪಿಯ ಹೋಟೆಲ್​ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು.

Mangalore
ಯುಎಇಯಿಂದ ನಾಳೆ ಮೊದಲ ಚಾರ್ಟರ್ಡ್ ವಿಮಾನ ಮಂಗಳೂರಿಗೆ
author img

By

Published : May 31, 2020, 11:39 PM IST

ಮಂಗಳೂರು: ಯುಎಇಯಿಂದ ನಾಳೆ ಮೊದಲ ಚಾರ್ಟರ್ಡ್ ವಿಮಾನ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಯುಎಇ ಮೂಲದ ಅನಿವಾಸಿ ಕನ್ನಡಿಗ ಉದ್ಯಮಿ ಪ್ರವೀಣ್ ಶೆಟ್ಟಿಯವರು ಖಾಸಗಿಯಾಗಿ ಬುಕ್ ಮಾಡಿರುವ ಈ ವಿಮಾನ ಬೆಳಗ್ಗೆ 9.30ಕ್ಕೆ ಯುಎಇಯಿಂದ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1.20 ಸುಮಾರಿಗೆ ಆಗಮಿಸಲಿದೆ.

ಲಾಕ್​ಡೌನ್ ಬಳಿಕ ಯುಎಇಯಿಂದ ಮಂಗಳೂರಿಗೆ ಆಗಮಿಸುವ ಪ್ರಥಮ ಚಾರ್ಟರ್ಡ್ ವಿಮಾನ ಇದಾಗಿದೆ. ಸ್ಪೈಸ್ ಜೆಟ್ ವಿಮಾನವನ್ನು ಬುಕ್ ಮಾಡಲಾಗಿದ್ದು, ಈ ವಿಮಾನದಲ್ಲಿ ಆರು ಮಕ್ಕಳು ಸೇರಿದಂತೆ 183 ಮಂದಿ ಆಗಮಿಸಲಿದ್ದಾರೆ.

ಫಾರ್ಚೂನ್ ಗ್ರೂಪ್ ಹೋಟೆಲ್ ಪಾಲುದಾರ ಪ್ರವೀಣ್ ಶೆಟ್ಟಿ, ತಮ್ಮ ಹೋಟೆಲ್ ಸಿಬ್ಬಂದಿ ಹಾಗೂ ಇತರರನ್ನು ಭಾರತಕ್ಕೆ ಕಳುಹಿಸಿಕೊಡಲು ಈ ವಿಮಾನವನ್ನು ಬುಕ್ ಮಾಡಿದ್ದಾರೆ. ಇದರಲ್ಲಿ ಮಂಗಳೂರು, ಉಡುಪಿ, ಕುಂದಾಪುರ ಹಾಗೂ ಕಾಸರಗೋಡು ನಿವಾಸಿಗಳು ಬರಲಿದ್ದಾರೆ. ಈ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರನ್ನು ಮಂಗಳೂರು ಹಾಗೂ ಉಡುಪಿಯ ಹೋಟೆಲ್​ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.