ಉಳ್ಳಾಲ : ರಸ್ತೆ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ಮೆಸ್ಕಾಂನ ಹಲವು ಕಿಲೋ ವ್ಯಾಟ್ ವಿದ್ಯುತ್ ಹೊಂದಿರುವ ತಂತಿಗಳಿಗೆ ತಾಗಿ ಕ್ರೇನ್ ರಸ್ತೆ ಮೇಲೆ ಬಿದ್ದಿದ್ದು ಸಂಭವಿಸಬಹಾಗಿದ್ದ ದುರಂತವೊಂದು ತಪ್ಪಿದಂತಾಗಿದೆ.
ತೊಕ್ಕೊಟು-ಮೆಲ್ಕಾರ್ ರಸ್ತೆ ಅಗಲೀಕರಣ ವೇಳೆ ಅಪಘಾತ ಸಂಭವಿಸಿದೆ. ಕ್ರೇನ್ನಿಂದ ಹಾರಿ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ. ರಸ್ತೆಗೆ ಬಿದ್ದ ವಿದ್ಯುತ್ ತಂತಿಗಳಿಂದ ಸೆಕೆಂಡುಗಳ ಅಂತರದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೂ ಪಾರಾಗಿದ್ದಾಳೆ.
ಘಟನೆಯಿಂದ ಕೆಲ ನಿಮಿಷಗಳ ಕಾಲ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಮೆಸ್ಕಾಂ ಎಇಇ ದಯಾನಂದ್ ಭೇಟಿ ನೀಡಿ ತುರ್ತು ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.