ಮಂಗಳೂರು: ನಗರದ ದೇರಳಕಟ್ಟೆಯ ಬಗಂಬಿಲದಲ್ಲಿ ಯುವತಿಗೆ ಚೂರಿ ಇರಿತವಾದ ಸಂದರ್ಭದಲ್ಲಿ ಮೊದಲಿಗೆ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾದ ನರ್ಸ್ ನಿಮ್ಮಿ ಸ್ಟೀಫನ್ ಅವರಿಗೆ ನಿಟ್ಟೆ ಇನ್‌ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್ನಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
ಇದನ್ನು ಓದಿ: ಮಂಗಳೂರಲ್ಲಿ ಯುವತಿಗೆ ಚೂರಿ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಯುವಕ!
ಇತ್ತೀಚೆಗೆ ಪಾಗಲ್ ಪ್ರೇಮಿ ಸುಶಾಂತ್ ಎಂಬಾತ ನಡುರಸ್ತೆಯಲ್ಲೇ ಯುವತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸುತ್ತಿದ್ದ. ಈ ವೇಳೆ ಸಂದರ್ಭ ಎಲ್ಲರೂ ಬೊಬ್ಬೆ ಹಾಕುತ್ತಿದ್ದರೇ ವಿನಃ ಯುವತಿಯನ್ನು ರಕ್ಷಿಸಲು ಮುಂದಾಗಿರಲಿಲ್ಲ. ಆಗ ಧೈರ್ಯ ಮಾಡಿ ಮೊದಲಿಗೆ ಹೋಗಿ ಯುವಕನನ್ನು ದೂಡಿ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನರ್ಸ್, ಕೇರಳದ ಪಯ್ಯಾವೂರ್ನ ನಿಮ್ಮಿ ಸ್ಟೀಫನ್ಗೆ ಎಲ್ಲಾ ಕಡೆಗಳಿಂದಲೂ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯು ನಿಮ್ಮಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ. ನರ್ಸ್ ನಿಮ್ಮಿ ಅವರ ಸಮಯಪ್ರಜ್ಞೆಯಿಂದ ಯುವತಿಯ ಪ್ರಾಣ ಉಳಿದಿದೆ. ನಿಮ್ಮಿ ಅವರ ಈ ಮಾನವೀಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.