ಕಡಬ(ದ.ಕ): ಕಡಬದ ರಾಮಕುಂಜ ನಿವಾಸಿ ನಾರಾಯಣ ಭಟ್ ಅವರ ‘ಮೋದಿಗೆ ಮೋದಿಯೇ ಸಾಟಿ‘ ಕೃತಿಯನ್ನು ಮುಖಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆಯ ಪ್ರಯುಕ್ತ ಗೌರವಾರ್ಥವಾಗಿ ಕರಾವಳಿ ಕರ್ನಾಟಕದಿಂದಲೇ ಮೊಟ್ಟಮೊದಲ ಬಾರಿಗೆ ಈ ತರಹ ಕೃತಿ ರಚಿಸಿರುವು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದ ಸಿಎಂ ಬೊಮ್ಮಾಯಿ ಅವರು, ಸಾಹಿತಿ ನಾರಾಯಣ ಭಟ್ ಅವರ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಪ್ರಾಯೋಜಕತ್ವದ ಈ ಕೃತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗಡೆ ಅವರು ಮುನ್ನುಡಿ ಬರೆದಿದ್ದಾರೆ. ಉಡುಪಿ ಪೇಜಾವರ ಮಠದ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ಬೆನ್ನುಡಿ ಬರೆದಿದ್ದಾರೆ. ಶಶಿ ಶಿವಮೊಗ್ಗ ಅವರ ಪರಿಕಲ್ಪನೆಯಲ್ಲಿ ಈ ಕೃತಿ ಮೂಡಿ ಬಂದಿದೆ.
ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಎಸ್.ಅಂಗಾರ, ದ.ಕ ಜಿಲ್ಲೆಯ ಶಾಸಕರುಗಳಾದ ವೇದವ್ಯಾಸ್ ಕಾಮತ್, ಸಂಜೀವ ಮಠಂದೂರು, ಡಾ.ಭರತ್ ಶೆಟ್ಟಿ, ರಾಜೇಶ್ ಕಾಮತ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ದೇವಸ್ಥಾನ ತೆರವು ವಿಚಾರದಲ್ಲಿ ತಾರತಮ್ಯ ಬೇಡ ; ರಂಭಾಪುರಿ ಶ್ರೀ ಅಸಮಾಧಾನ