ETV Bharat / state

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಅಪಪ್ರಚಾರ: ಸಚಿವ ಮಧು ಬಂಗಾರಪ್ಪ ಆರೋಪ - ಲೋಕಸಭಾ ಚುನಾವಣೆ

Textbook revision without political intent: ಪಠ್ಯಪುಸ್ತಕ ಪೂರ್ಣವಾಗಿ ಪರಿಷ್ಕರಣೆ ಆಗಲಿದೆ. ತಜ್ಞರ ಸಮಿತಿ ಸಲಹೆ ಮೇರೆಗೆ ಯಾವುದೇ ರಾಜಕೀಯ ಉದ್ದೇಶವಿಲ್ಲದೇ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Minister Madhu Bangarappa spoke at a press conference.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Jul 22, 2023, 6:20 PM IST

Updated : Jul 22, 2023, 7:10 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಂಗಳೂರು: ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಬಿಜೆಪಿಯವರು ಇದೇ ನೀಚಬುದ್ದಿ ಮಾಡಿಕೊಂಡು ಹೋಗಲಿ ಎಂದು ಮಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ‌ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವನಾತ್ಮಕ ನಾಟಕಕ್ಕೆ ರಾಜ್ಯದ ಜನ ಬುದ್ದಿ ಕಲಿಸಿದ್ದಾರೆ. ಅವರನ್ನು ಸೋಲಿಸಿ ಜನರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಬಿಜೆಪಿಯವರ ಜೀವನ ನಡೆಯೋದು ಕೂಡ ನಮ್ಮ ಗ್ಯಾರಂಟಿ ಮೇಲೆ ಎಂದು ವ್ಯಂಗ್ಯವಾಡಿದರು.

ಸದ್ಯ ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ವಾರಕ್ಕೆ ಎರಡು ಬಾರಿ ಮೊಟ್ಟೆ ಕೊಡಲಾಗ್ತಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಸರ್ಕಾರ ಇದನ್ನು ಮಾಡಿದೆ. ಶಿಕ್ಷಕರ ಕೊರತೆ ರಾಜ್ಯದಲ್ಲಿ ಇದೆ, ಅದನ್ನ ನಾವು ಸರಿ ಮಾಡ್ತೇವೆ. ಇದರ ಮಧ್ಯೆ ದಾಖಲೆ ಪ್ರಮಾಣದಲ್ಲಿ 25 ಸಾವಿರ ಶಿಕ್ಷಕರ ವರ್ಗಾವಣೆ ಆಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ನಾನು ಅಧಿಕಾರಕ್ಕೆ ಬಂದ ಕೂಡಲೇ ಮಾಡಿದೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆದಾಗಲಿ ಅಂತ ಈ ತೀರ್ಮಾನ ಮಾಡಲಾಗಿದೆ ಎಂದರು.

ಇದರಲ್ಲಿ ಬಿಜೆಪಿಯವರು ಹೇಳುವ ಯಾವುದೇ ರಾಜಕೀಯ ಇಲ್ಲ. ಈ ಬಿಜೆಪಿಯವರು ಸಭಾಧ್ಯಕ್ಷರ ಪೀಠವನ್ನೇ ಅವಮಾನಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ನಮ್ಮನ್ನು ಗೆಲ್ಲಿಸ್ತಾರೆ. ಕರಾವಳಿ ಭಾಗ ಕಲ್ಮಶ ಆಗಿದ್ದು ನಿಜ, ಆದರೆ ಮತ್ತೆ ಶಾಂತಿ ಸೌಹಾರ್ದತೆ ಬರಲಿದೆ. ನಮ್ಮ ಸರ್ಕಾರ ಅವೆಲ್ಲವನ್ನೂ ಮತ್ತೆ ತರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಪೂರ್ಣವಾಗಿ ಪರಿಷ್ಕರಣೆ: ಪಠ್ಯಪುಸ್ತಕ ಪೂರ್ಣವಾಗಿ ಮತ್ತೆ ಪರಿಷ್ಕರಣೆ ಆಗಲಿದೆ. ಬಿಜೆಪಿಯವರು ಏನು ಬದಲಿಸಿದ್ದರೋ, ಅದನ್ನು ಬದಲಿಸಿ, ಮೊದಲು ಇದ್ದಿದ್ದನ್ನೂ ಈಗ ತಂದಿದ್ದೇವೆ. ತುರ್ತಾಗಿ ಈಗ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಮುಂದಿನ ವರ್ಷ ಮಕ್ಕಳಿಗೆ ಅನುಕೂಲವಾಗುವಂತೆ ಬದಲಾಯಿಸ್ತೀವಿ.

ತಜ್ಞರ ಸಮಿತಿ ಮೂಲಕ ಅವಶ್ಯಕತೆ ಇದ್ದ ಬದಲಾವಣೆ ಮಾಡ್ತೀವಿ. ಯಾವುದೇ ರಾಜಕೀಯ ಉದ್ದೇಶ ಇಲ್ಲದೇ ಬದಲಾವಣೆ ಆಗಲಿದೆ. ಮುಖ್ಯಮಂತ್ರಿಗಳ ಸಲಹೆ ಪಡೆದು ಅವರ ಸಹಕಾರದಿಂದ ಎಲ್ಲವೂ ಆಗಲಿದೆ. ಮಕ್ಕಳಿಗೆ ಉತ್ತಮ ಮತ್ತು ತಿಳಿವಳಿಕೆಯ ಪಠ್ಯಗಳು ಇರಬೇಕು ಎಂದು ತಿಳಿಸಿದರು. ಸಿದ್ದರಾಮಯ್ಯ ವಿರುದ್ದ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವಿಚಾರದಲ್ಲಿ ಮಾತನಾಡಿದ ಅವರು ಬಿ.ಕೆ.ಹರಿಪ್ರಸಾದ್ ಹೇಳಿಕೆಯ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ.‌ ಅವರು ಹಿರಿಯರು ಅವರ ಮಾತುಗಳಲ್ಲಿ ಏನಾದ್ರೂ ಇದ್ದರೆ ಗಮನಿಸಬೇಕು ಎಂದು ಹೇಳಿದರು.

ಆದರೆ ಬಿ ಕೆ ಹರಿಪ್ರಸಾದ್ ಮಾತಿಗೆ ನಾನು ಪ್ರತಿಕ್ರಿಯೆ ಕೊಡೋದು ಸರಿಯಿರಲ್ಲ. ಅದು ಪಕ್ಷದ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದ ವಿಚಾರ. ಅವರು ಹಿರಿಯರಿದ್ದಾರೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡಲ್ಲ. ಅವರ ಮಾತಿನಲ್ಲಿ ಏನಾದರೂ ಇದ್ದಲ್ಲಿ ಅದರ ಬಗ್ಗೆ ಚರ್ಚೆಯಾಗಬೇಕು. ಅವರ ಮಾತಿನಲ್ಲಿ ಸರಿಯಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಇದನ್ನೂಓದಿ:ಪಿಎಸ್ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ..ಸರ್ಕಾರದ ಆಲೋಚನೆ ಏನೆಂದು ನನಗೆ ತಿಳಿದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

Last Updated : Jul 22, 2023, 7:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.