ಪುತ್ತೂರು: ಲಾಕ್‌ಡೌನ್ ಹಿನ್ನೆಲೆ ಕಳೆದ 13 ದಿನಗಳಿಂದ ಬಂದ್ ಆಗಿದ್ದ ಬೇಕರಿಗಳು ಬುಧವಾರ ಮಧ್ಯಾಹ್ನದ ವೇಳೆ ತೆರೆದುಕೊಂಡಿವೆ. ಆದರೆ, ಬೇಕರಿಗೆ ಆಗಮಿಸುವ ಗ್ರಾಹಕರಿಗೆ ಅಲ್ಲಿ ಯಾವುದೇ ಪಾನೀಯ ಕುಡಿಯಲು ಅಥವಾ ಇತರ ಆಹಾರ ಪದಾರ್ಥಗಳನ್ನು ತಿನ್ನಲು ಅವಕಾಶ ನೀಡಲಾಗಿಲ್ಲ. ಕೇವಲ ಖರೀದಿ ನಡೆಸಿ ಮನೆಗೆ ಕೊಂಡೊಯ್ಯಲು ಮಾತ್ರ ಅವಕಾಶಗಳನ್ನು ಕಲ್ಪಿಸಲಾಗಿದೆ.
ಪುತ್ತೂರು ನಗರದಲ್ಲಿ ಬೇಕರಿ ಓಪನ್... ಖರೀದಿ ಮಾತ್ರ, ಸೇವನೆಗಿಲ್ಲ ಅವಕಾಶ - ಸೋಮವಾರ ರಾತ್ರಿ ಬೇಕರಿಗಳಿಗೆ ಅನುಮತಿ ನೀಡಿ ಆದೇಶ
ಕಳೆದ ಎರಡು ವಾರಗಳಿಂದ ಬೇಕರಿ ಅಂಗಡಿಗಳು ಹಾಗೂ ತಯಾರಿಕೆ ನಿಲ್ಲಿಸಿದ್ದರಿಂದ ಅಂಗಡಿಗಳಲ್ಲಿ ಬೇಕರಿ ತಿನಿಸುಗಳ ಶೇಖರಣೆ ಇರಲಿಲ್ಲ. ಸೋಮವಾರ ರಾತ್ರಿ ಬೇಕರಿಗಳಿಗೆ ಅನುಮತಿ ನೀಡಿ ಆದೇಶ ಹೊರಡಿಸಿರುವುದರಿಂದ ಅಂಗಡಿಗಳಿಗೆ ಬೇಕಾದ ತಿಂಡಿಗಳ ತಯಾರಿಕೆ-ಪೂರೈಕೆ ಇನ್ನಷ್ಟೇ ಆಗಬೇಕಿದೆ.
![ಪುತ್ತೂರು ನಗರದಲ್ಲಿ ಬೇಕರಿ ಓಪನ್... ಖರೀದಿ ಮಾತ್ರ, ಸೇವನೆಗಿಲ್ಲ ಅವಕಾಶ Bakery Open in Puttur City .](https://etvbharatimages.akamaized.net/etvbharat/prod-images/768-512-6708216-100-6708216-1586332254625.jpg?imwidth=3840)
ಪುತ್ತೂರು ನಗರದಲ್ಲಿ ಬೇಕರಿ ಓಪನ್
ಪುತ್ತೂರು: ಲಾಕ್‌ಡೌನ್ ಹಿನ್ನೆಲೆ ಕಳೆದ 13 ದಿನಗಳಿಂದ ಬಂದ್ ಆಗಿದ್ದ ಬೇಕರಿಗಳು ಬುಧವಾರ ಮಧ್ಯಾಹ್ನದ ವೇಳೆ ತೆರೆದುಕೊಂಡಿವೆ. ಆದರೆ, ಬೇಕರಿಗೆ ಆಗಮಿಸುವ ಗ್ರಾಹಕರಿಗೆ ಅಲ್ಲಿ ಯಾವುದೇ ಪಾನೀಯ ಕುಡಿಯಲು ಅಥವಾ ಇತರ ಆಹಾರ ಪದಾರ್ಥಗಳನ್ನು ತಿನ್ನಲು ಅವಕಾಶ ನೀಡಲಾಗಿಲ್ಲ. ಕೇವಲ ಖರೀದಿ ನಡೆಸಿ ಮನೆಗೆ ಕೊಂಡೊಯ್ಯಲು ಮಾತ್ರ ಅವಕಾಶಗಳನ್ನು ಕಲ್ಪಿಸಲಾಗಿದೆ.
ಪುತ್ತೂರು ನಗರದಲ್ಲಿ ಬೇಕರಿ ಓಪನ್
ಕಟ್ಟು ನಿಟ್ಟಿನ ಬಿಗಿ ಕ್ರಮ: ನಗರದಲ್ಲಿ ವಾಹನಗಳ ಸಂಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಂಗಳವಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ. ಅನಗತ್ಯ ಎಂದು ಕಂಡು ಬಂದ ಯಾವುದೇ ವಾಹನಗಳನ್ನೂ ನಗರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ದ್ವಿಚಕ್ರ ಹಾಗೂ ಆಟೋ ರಿಕ್ಷಾಗಳನ್ನು ಹಾಗೂ ಸರಕು ಸಾಗಾಟದ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಗ್ರಾಮೀಣ ಭಾಗದಿಂದ ದಿನಸಿ ಅಂಗಡಿಗಳಿಗೆ ಬರುವ ಹಾಗೂ ಮೆಡಿಕಲ್‌ಗೆ ಬರುವ ಗ್ರಾಹಕರ ಸಂಖ್ಯೆಯೂ ವಿರಳವಾಗಿತ್ತು.