ETV Bharat / state

ಬಂಟ್ವಾಳ; ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ

ತಾಲೂಕಿನ 10 ಸಾವಿರ ಮಂದಿಗೆ ಆಯುಷ್ಮಾನ್ ಕಾರ್ಡ್ ಸವಲತ್ತು ಒದಗಿಸುವ ಗುರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಂದಿದೆ.

Ayushman card registration program
Ayushman card registration program
author img

By

Published : Aug 26, 2020, 4:24 PM IST

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ ವತಿಯಿಂದ ಇಂದು ಬಂಟ್ವಾಳದಲ್ಲಿರುವ ಯೋಜನಾ ಉನ್ನತಿ ಸೌಧದಲ್ಲಿ ಸರ್ಕಾರಿ ಸೌಲಭ್ಯಗಳ ಮಾಹಿತಿ, ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ನಡೆಯಿತು.

ತಾಲೂಕಿನ 10 ಸಾವಿರ ಮಂದಿಗೆ ಆಯುಷ್ಮಾನ್ ಕಾರ್ಡ್ ಸವಲತ್ತು ಒದಗಿಸುವ ಗುರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಒಟ್ಟು 200 ಮಂದಿಗೆ ಕಾರ್ಡ್ ನೋಂದಣಿ ಕಾರ್ಯಕ್ರಮ ಇಂದು ನಡೆದಿದ್ದು, ಕಾರ್ಯಕ್ರಮವನ್ನು ಬಂಟ್ವಾಳ ಉಪತಹಶೀಲ್ದಾರ್ ಶ್ರೀಧರ್ ಉದ್ಘಾಟಿಸಿದರು.

ಅಮ್ಟೂರು ಗ್ರಾಮದ ಫಲಾನುಭವಿಗೆ ವೈದ್ಯಕೀಯ ವೆಚ್ಚದ ಸಹಾಯಧನ ವಿತರಿಸಲಾಯಿತು. ಯೋಜನಾಧಿಕಾರಿ ಜಯಾನಂದ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕ ಕೇಶವ ಕೆ. ಸ್ವಾಗತಿಸಿದರು. ಬಂಟ್ವಾಳ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸ್ವಪ್ನ ಆರ್. ಜೈನ್ ವಂದಿಸಿದರು. ಮೇಲ್ವಿಚಾರಕಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.

ಈ ವೇಳೆ ಆಯುಷ್ಮಾನ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ರತ್ನಾಕರ್, ಡಾ. ಅನಿರುದ್ಧ್ ಶೆಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್ ಮಾಂಬಾಡಿ, ಯೋಜನೆಯ ಬಿ.ಸಿ. ರೋಡು ವಲಯಾಧ್ಯಕ್ಷ ಶೇಖರ್ ಸಾಮಾನಿ, ಬಂಟ್ವಾಳ ವಲಯಾಧ್ಯಕ್ಷ ವಸಂತ್ ಮೂಲ್ಯ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.