ETV Bharat / state

ಯುಎಇಯಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ತಂದ ಖಾಸಗಿ ವಿಮಾನ - mangalore latest news

ಲಾಕ್​ ಡೌನ್ ಬಳಿಕ ಯುಎಇಯಿಂದ ಮಂಗಳೂರಿಗೆ ಆಗಮಿಸಿದ ಪ್ರಥಮ ಖಾಸಗಿ ಬುಕ್ಕಿಂಗ್ ಅಥವಾ ಚಾರ್ಟರ್ಡ್ ವಿಮಾನ ಇದಾಗಿದೆ. ಈ ಸ್ಪೈಸ್ ಜೆಟ್ ವಿಮಾನದಲ್ಲಿ ಆರು ಮಕ್ಕಳ ಸಹಿತ 183 ಮಂದಿ ಇದ್ದರು.

A private flight arrived from UAE to Mangalore
ಯುಎಇಯಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ತಂದ ಖಾಸಗಿ ವಿಮಾನ
author img

By

Published : Jun 2, 2020, 6:36 AM IST

ಮಂಗಳೂರು: ಯುಎಇಯಿಂದ ಮೊದಲ ಖಾಸಗಿ ಬುಕ್ಕಿಂಗ್ ವಿಮಾನ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ 11 ಗಂಟೆಗೆ ಬಂದಿಳಿದಿದೆ.

ಯುಎಇ ಮೂಲದ ಅನಿವಾಸಿ ಕನ್ನಡಿಗ ಉದ್ಯಮಿ ಪ್ರವೀಣ್ ಶೆಟ್ಟಿಯವರು ಖಾಸಗಿಯಾಗಿ ಬುಕ್ ಮಾಡಿರುವ ಈ ವಿಮಾನ ಯುಎಇಯಿಂದ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಲಾಕ್​ ಡೌನ್ ಬಳಿಕ ಯುಎಇಯಿಂದ ಮಂಗಳೂರಿಗೆ ಆಗಮಿಸಿದ ಪ್ರಥಮ ಖಾಸಗಿ ಬುಕ್ಕಿಂಗ್ ಅಥವಾ ಚಾರ್ಟರ್ಡ್ ವಿಮಾನ ಇದಾಗಿದೆ. ಈ ಸ್ಪೈಸ್ ಜೆಟ್ ವಿಮಾನದಲ್ಲಿ ಆರು ಮಕ್ಕಳ ಸಹಿತ 183 ಮಂದಿ ಇದ್ದರು.

ಫಾರ್ಚೂನ್ ಗ್ರೂಫ್​ ಹೊಟೇಲ್ ಪಾಲುದಾರ ಪ್ರವೀಣ್ ಶೆಟ್ಟಿ ತಮ್ಮ ಹೊಟೇಲ್ ಸಿಬ್ಬಂದಿ ಹಾಗೂ ಇತರರನ್ನು ಭಾರತಕ್ಕೆ ಕಳುಹಿಸಿಕೊಡಲು ಈ ವಿಮಾನವನ್ನು ಬುಕ್ ಮಾಡಿದ್ದಾರೆ. ಇದರಲ್ಲಿ ಮಂಗಳೂರು, ಉಡುಪಿ, ಕುಂದಾಪುರ ಹಾಗೂ ಕಾಸರಗೋಡು ನಿವಾಸಿಗಳು ಆಗಮಿಸಿದ್ದಾರೆ. ಈ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರು ಮಂಗಳೂರಿನಲ್ಲಿ ಇಳಿದ ಬಳಿಕ ಆರೋಗ್ಯ ಅಧಿಕಾರಿಗಳು ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿದ್ದು, ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ಬಳಿಕ ಎಲ್ಲಾ ಪ್ರಯಾಣಿಕರನ್ನು ಮಂಗಳೂರು ಹಾಗೂ ಉಡುಪಿಯ ಹೊಟೇಲ್​ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.