ETV Bharat / state

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆ: ಅಪಹರಣ ಶಂಕೆ

author img

By

Published : Oct 12, 2020, 7:59 PM IST

ಮಹಮ್ಮದ್ ಆಲಿ ಮತ್ತು ಹಸೀನಾ ಎಂಬುವರ 9 ವರ್ಷದ ಪುತ್ರ ಪೈರೋಜ್ ಆಲಿ ನಾಪತ್ತೆಯಾದ ಬಾಲಕ. ಬಾಲಕನನ್ನು ಯಾರೋ ಅಪಹರಿಸಿರಬಹುದು ಎಂಬ ಆತಂಕ ಹಾಗೂ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದಾರೆ.

boy
ಬಾಲಕ

ಪುತ್ತೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ನಾಪತ್ತೆಯಾದ ಪ್ರಕರಣ ಪುತ್ತೂರು ತಾಲೂಕಿನ ಕಬಕದ ನೆಹರು ನಗರದಲ್ಲಿ ನಡೆದಿದೆ.

ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಹಮ್ಮದ್ ಆಲಿ ಮತ್ತು ಹಸೀನಾ ಎಂಬುವರ 9 ವರ್ಷದ ಪುತ್ರ ಪೈರೋಜ್ ಆಲಿ ನಾಪತ್ತೆಯಾದ ಬಾಲಕ. ಬಾಲಕನನ್ನು ಯಾರೋ ಅಪಹರಿಸಿರಬಹುದು ಎಂಬ ಆತಂಕ ಹಾಗೂ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದಾರೆ.

ಅ. 9 ರಂದು ಸಂಜೆ 6 ಗಂಟೆ ಸುಮಾರಿಗೆ ಮನೆಯ ಅಂಗಳದಲ್ಲಿ ಪೈರೋಜ್ ಆಡುತ್ತಿದ್ದ, ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ತಾಯಿ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರಲ್ಲಿ ಹಾಗೂ ಪರಿಚಯದವರಲ್ಲಿ ವಿಚಾರಿಸಿದರೂ ಮಗನ ಸುಳಿವು ದೊರೆತಿಲ್ಲ. ಹೀಗಾಗಿ ಅ.11 ರಂದು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.