ಮಂಗಳೂರು: ಲಾಕ್ಡೌನ್ ನಿಂದ ವಿದೇಶದಲ್ಲಿ ಸಿಲುಕಿರುವವರನ್ನು ರಕ್ಷಿಸಿ ಮರಳಿ ಭಾರತಕ್ಕೆ ಕರೆತರುವ ಕಾರ್ಯ ಮತ್ತೆ ಮುಂದುವರಿದಿದ್ದು, ಮಸ್ಕತ್ ನಿಂದ ಅನಿವಾಸಿ ಕನ್ನಡಿಗರನ್ನು ಹೊತ್ತು ತಂದಿರುವ ಚಾರ್ಟರ್ಡ್ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಮಸ್ಕತ್ ನಿಂದ ನಸುಕಿನ ಜಾವ ಹೊರಟ ಚಾರ್ಟರ್ಡ್ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9ಕ್ಕೆ ಮಂಗಳೂರು ತಲುಪಿದೆ. ಈ ಬಾಡಿಗೆ ವಿಮಾನದಲ್ಲಿ 184 ಮಂದಿ ಅನಿವಾಸಿ ಕನ್ನಡಿಗರು ಮಂಗಳೂರಿಗೆ ಆಗಮಿಸಿದ್ದಾರೆ.
ವಿಮಾನದಲ್ಲಿ ಬಂದಿರುವ 184 ಮಂದಿಯಲ್ಲಿ ಮಂಗಳೂರಿನ 142 ಮಂದಿ, ಉಡುಪಿಯ 42 ಮಂದಿ ಅನಿವಾಸಿ ಕನ್ನಡಿಗರಿದ್ದರು. ಇವರೆಲ್ಲರನ್ನೂ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.