ದಕ್ಷಿಣ ಕನ್ನಡ: ಮನೆಯಲ್ಲಿ ಓದಲು ಹೇಳಿದ್ದಕ್ಕೆ ಹತ್ತು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಿನ್ನಿಗೋಳಿಯ ಐಕಳ ಎಂಬಲ್ಲಿ ನಡೆದಿದೆ. 5ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಧ್ರುವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದು, ಈಕೆ ಕಮ್ಮಾಜೆ ನಿವಾಸಿ ಗೋವಿಂದ ಎಂಬುವರ ಪುತ್ರಿ ಎಂದು ತಿಳಿದು ಬಂದಿದೆ.
ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಅಜ್ಜಿಯೊಂದಿಗೆ ಟಿವಿ ನೋಡುತ್ತಿದ್ದಳಂತೆ. ಆಗ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಬಾಲಕಿಗೆ ಅಜ್ಜಿ ಓದಿಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಅಸಮಾಧಾನಗೊಂಡು ಕೋಣೆಗೆ ಹೋದ ಬಾಲಕಿ, ಕೂದಲನ್ನು ಕಟ್ಟುವ ರಿಬ್ಬನ್ ಕಿಟಕಿಗೆ ಕಟ್ಟಿ ಕುತ್ತಿಗೆಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ವಿದ್ಯುತ್ ಸಂಪರ್ಕ ಮತ್ತೆ ಬಂದಾಗಲು ಬಾಲಕಿ ಹೊರಗೆ ಬಂದಿಲ್ಲ. ಇದರಿಂದ ಅನುಮಾನಗೊಂಡು ಕೋಣೆಯಲ್ಲಿ ಇಣುಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇನ್ನು ಈ ಕುರಿತಾಗಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.