ಚಿತ್ರದುರ್ಗ: ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆ ರಾಜ್ಯದೆಲ್ಲೆಡೆ ನಡೆಯುತ್ತಿದೆ. ಆದ್ರೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೋಟೆನಾಡಿನಲ್ಲಿ ದುಬಾರಿ ಬೆಲೆಗೆ ಕಬ್ಬು ಮಾರಾಟವಾಗುತ್ತಿದೆ.
ಕೋಟೆನಾಡಿನಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ ನಗರದ ಗಾಂಧಿವೃತ್ತ, ಪ್ರವಾಸಿ ಮಂದಿರದ ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಸಾರ್ವಜನಿಕರು ಹೂವು-ಹಣ್ಣು, ಕಬ್ಬು, ಪೂಜಾ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಒಂದು ಜೊತೆ ಕಬ್ಬು 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಜನರು ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ.ಇದನ್ನೂ ಓದಿ: ಬಿಎಸ್ವೈ ಮಾತು ತಪ್ಪಲ್ಲ, ಹಣೆಯಲ್ಲಿ ಬರೆದಿದ್ರೆ ಸಚಿವನಾಗುತ್ತೇನೆ; ಶಾಸಕ ಮುನಿರತ್ನ ಪ್ರತಿಕ್ರಿಯೆ..!
ಹೂವು, ಹಣ್ಣು, ತರಕಾರಿಗಳ ಬೆಲೆಯೂ ಗಗನಕ್ಕೇರಿದೆ. ಸೇಬು ಕೆ.ಜಿಗೆ 200 ರೂ, ಬಾಳೆಹಣ್ಣು ಒಂದು ಕೆ.ಜಿಗೆ 60 ರಿಂದ 80 ರೂಪಾಯಿಯಾಗಿದೆ.