ETV Bharat / state

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತನ್ನಿ: ಕೋಟೆನಾಡಿನ ರೈತರ ಅಳಲು - Kannada news

ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಘೋಷಣೆ ಮಾಡಿದ್ದ ನೀರಾವರಿ ಯೋಜನೆ ಘೋಷಣೆಯಾಗಿಯೇ ಉಳಿದಿದೆ ವಿನಾ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ.

ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ
author img

By

Published : Jul 16, 2019, 8:47 PM IST

ಚಿತ್ರದುರ್ಗ: ತೀವ್ರ ಬರಗಾಲದಿಂದ ಬೇಸತ್ತಿದ್ದ ಬರದನಾಡು ಚಿತ್ರದುರ್ಗದ ರೈತರ ಮೇಲೆ ಈ ಬಾರಿಯು ಮುಂಗಾರು ಮಳೆ ಮುನಿಸಿಕೊಂಡಿದೆ. ಮಳೆ ಇಲ್ಲದೆ ರೈತರು ಹೈರಾಣಾಗಿದ್ದಾರೆ. ಅದರೆ ಅ ಭಾಗದ ಮಹಾತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಏತನೀರವಾರಿ ಯೋಜನೆ ಮಾತ್ರ ಕುಂಠಿತಗೊಂಡಿದೆ.

ದಾವಣೆಗೆರೆ ಸೇರಿದಂತೆ ಜಿಲ್ಲೆಯ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕು ವ್ಯಾಪ್ತಿಯಲ್ಲಿ ಬರುವ 16 ಕೆರೆಗಳನ್ನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ತುಂಬಿಸಲು 2017ರಲ್ಲೇ ಅನುಮೊದನೆ ನೀಡಿ ಹಣವನ್ನೂ ಬಿಡುಗಡೆ ಮಾಡಲಾಗಿತ್ತು. ಆದರೆ ಆಡಳಿತಾತ್ಮಕ ಮಂಜೂರು ಸಿಗದ ಕಾರಣ ರೈತರ ಕನಸು ಕನಸಾಗಿಯೇ ಉಳಿದಿದೆ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಸಂಘಟಿತರಾಗಿರುವ ಸುಮಾರು 45 ಗ್ರಾಮಗಳ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸರ್ಕಾರಕ್ಕೆ ತಮ್ಮ ಅಳಲು ತೋಡಿಕೊಂಡರು.

ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

ರೈತರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಆರಂಭದಿಂದಲೂ ಮುರುಘಾ ಮಠ ನೀರಾವರಿ ಹೋರಾಟದ ಮುಂಚೂಣಿ ವಹಿಸಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿತ್ತು. ಆದ್ರೆ ಮಂದಗತಿಯ ಕಾಮಗಾರಿಯಿಂದಾಗಿ ನೀರಿನ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಸರ್ಕಾರ ಎರಡನೇ ಹಂತದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕರೆಗಳನ್ನು ತುಂಬಿಸುವ ವಿಶ್ವಾಸವಿದೆ. ಒಂದು ವೇಳೆ ನಂಬಿಕೆ ಹುಸಿಯಾದ್ರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Intro:ಸಾಸ್ವೇಹಳ್ಳಿ ಏತನೀರಾವರಿ ಅನುಷ್ಠಾನಕ್ಕೆ ತನ್ನಿ ಕೆರೆಗಳನ್ನು ತುಂಬಿಸಿ : ಕೋಟೆನಾಡು ಚಿತ್ರದುರ್ಗದ ರೈತರ ಅಳಲು

ಆ್ಯಂಕರ್: ತೀವ್ರ ಬರಗಾಲದಿಂದ ಬೇಸತ್ತಿದ್ದ ಬರದನಾಡು ಚಿತ್ರದುರ್ಗದ ರೈತರ ಮೇಲೆ ಈ ಬಾರಿಯು ಮುಂಗಾರು ಮಳೆ ಮುನಿಸಿಕೊಂಡಿದೆ. ಮಳೆ ಇಲ್ಲದೆ ರೈತರು ಹೈರಾಣಾಗಿದ್ದಾರೆ. ಅದ್ರೇ ಅ ಭಾಗದ ಮಹಾತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಏತನೀರವಾರಿ ಯೋಜನೆ ಮಾತ್ರ ಕುಂಠಿತಗೊಂಡಿದೆ. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಘೋಷಣೆ ಮಾಡಿದ ನೀರಾವರಿ ಯೋಜನೆ ಘೋಷಣೆಯಾಗಿಯೇ ಉಳಿದಿದೆ ವಿನಃ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ...

ಲುಕ್,,,,,

ಫ್ಲೋ,,,,,,,

ವಾಯ್ಸ್01:- ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಸರ್ಕಾರ ಏನೋ ಘೋಷಣೆ ಮಾಡಿತ್ತು. ಅದ್ರೇ ಅದು ಅನುಷ್ಠಾನಕ್ಕೆ ಬಾರದೆ ಘೋಷಣೆಯಾಗಿಯೇ ಉಳಿದಿದೆ. ಹೌದು ದಾವಣೆಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ವ್ಯಾಪ್ತಿಯಲ್ಲಿ ಬರುವ ಸಾಸ್ವೇಹಳ್ಳಿ ಏತಾ ನೀರಾವರಿ ಯೋಜನೆ ಕುಂಠಿತಗೊಂಡಿದೆ. ದಾವಣೆಗೆರೆ ಸೇರಿದ್ದಂತೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕು ವ್ಯಪ್ತಿಯಲ್ಲಿ ಬರುವ 16 ಕೆರೆಗಳನ್ನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸಲು 2017ರಲ್ಲೇ ಅನುಮೊಧನೆ ನೀಡಿ ಹಣವನ್ನೂ ಬಿಡುಗಡೆ ಮಾಡಲಾಗಿದೆ, ಆದರೆ ಇನ್ನೂ ಕೂಡ ಆಡಳಿತಾತ್ಮಕ ಮಂಜೂರು ಸಿಗದ ಕಾರಣ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ಈ ಎರಡೂ ತಾಲೂಕುಗಳು ಯೋಜನೆಯಿಂದ ವಂಚಿತವಾಗಿವೆ, ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಸಂಘಟಿತರಾಗಿರುವ ಸುಮಾತು 45ಗ್ರಾಮಗಳ ರೈತರು ಇಂದು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸರ್ಕಾರಕ್ಕೆ ತಮ್ಮ ಅಳಲು ತೋಡಿಕೊಂಡರು..

ಫ್ಲೋ,,,,,

ಬೈಟ್01:- ನವೀನ್ ಕುಮಾರ್, ರೈತ ಮುಖಂಡ, ಹಿರೆಗುಂಟನೂರು.

ವಾಯ್ಸ್02:- ಇನ್ನೂ ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರತಿಭಟೆನೆಯಲ್ಲಿ ಭಾಗಿಯಾಗಿ ಆಕ್ರೋಶವ್ಯಲಕ್ತಪಡಿಸಿದರು. ಮಧ್ಯಕರ್ನಾಟಕ ಭಾಗದ ಹೋರಾಟಕ್ಕೆ ದಶಕಗಳ ಇತಿಹಾಸವಿದೆ, ಆರಂಭದಿಂದಲೂ ಮುರುಘಾ ಮಠ ನೀರಾವರಿ ಹೊರಾಟದ ಮುಂಚೂಣಿ ವಹಿಸಿದೆ, ಅದರಿಂದಾಗಿಯೇ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿದೆ, ಆದ್ರೆ ಮಂದಗತಿಯ ಕಾಮಗಾರಿಯಿಂದಾಗಿ ಇನ್ನೂ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ, ಈ ನಡುವೆ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನ ರೈತರ ಹೋರಾಟಕ್ಕೆ ಚಾಲನೆ ದೊರೆತಿದ್ದು, ಸರ್ಕಾರ ಎರಡನೇ ಹಂತದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಎರಡೂ ತಾಲೂಕುಗಳ ಕೆರೆಗಳನ್ನ ತುಂಬಿಸುವ ವಿಶ್ವಾಸವಿದೆ, ಒಂದು ವೇಳೆ ನಮ್ಮ ನಂಬಿಕೆ ಹುಸಿಯಾದೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಫ್ಲೋ,,,

ಬೈಟ್02:- ಡಾ.ಶಿವಮೂರ್ತಿ ಮುರುಘಾ ಶರಣರು. ಮುರುಘಾ ಮಠ, ಚಿತ್ರದುರ್ಗ

ವಾಯ್ಸ್03:- ಒಟ್ಟಾರೆ ಒಂದು ಕಾಲದಲ್ಲಿ ಅತಿಹೆಚ್ಚು ಅಡಿಕೆ ತೆಂಗು ಬೆಳಿಯುತ್ತಿದ್ದ ಎರಡೂ ತಾಲೂಕುಗಳ ವ್ಯಾಪ್ತಿಯ ಹಲವಾರು ಗ್ರಾಮಗಳ ರೈತರು ಮಳೆ ಇಲ್ಲದೆ ಹೈರಾಣಾಗಿದ್ದಾರೆ, ಇತ್ತಾ ಇತ್ತೀಚೆಗೆ ತೀವ್ರ ಬರಗಾಲಕ್ಕೆ ಸಿಲುಕಿದ ತೋಟಗಳು ಒಣಗಿ ನಿಂತಿವೆ, ಇಷ್ಟಾದರೂ ರಾಜ್ಯ ಸರ್ಕಾರ ಇತ್ತ ಗಮನಹರಿಸಿ ರೈತರ ಬೇಡಿಕೆಗೆ ಸ್ಪಂದಿಸುವ ಮೂಲಕ ಅನ್ನದಾತರ ಬೆನ್ನಲೆಬು ಆಗಿರುವ ಸಾಸ್ವೇಹಳ್ಳಿ ಏತಾನೀರಾವರಿ ಯೋಜನೆಯನ್ನು ಅದಾಷ್ಟು ಬೇಗಾ ಅನುಷ್ಠಠಾನಕ್ಕೆ ತರುವ ಮೂಲಕ ರೈತರ ಧ್ವನಿಯಾಗಿ ನಿಲ್ಲಬೇಕಾಗಿದೆ.

ಡಿ ನೂರುಲ್ಲಾ ಈಟಿವಿ ಭಾತರ ಚಿತ್ರದುರ್ಗ         

Body:sasve halli niravari Conclusion:pkg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.