ಚಿಕ್ಕಮಗಳೂರು : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ನಗರದ ಹೊರವಲಯದ ಕಲ್ಯಾಣನಗರದಲ್ಲಿ ನಡೆದಿದೆ. ಯುವಕರು, ಮಹಿಳೆಯರು ದೊಣ್ಣೆಯಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಮನಸ್ಸೋ ಇಚ್ಛೆ ಕೋಲಿನಿಂದ ಹೊಡೆದಾಡಿಕೊಂಡಿದ್ದು, ಮಹಿಳೆಯರು ಮತ್ತು ಯುವಕರನ್ನು ಬಿಡಿಸಲು ಹೋದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಗ್ರಾಮದ ನಡು ರಸ್ತೆಯಲ್ಲಿಯೇ ಈ ಹೊಡೆದಾಟ ನಡೆದಿದ್ದು, ಕಲ್ಲಿನಿಂದಲೂ ಹೊಡೆದಾಟ ನಡೆಸಲು ಮುಂದಾಗಿದ್ದಾರೆ.
ಪರಸ್ವರ ಒಬ್ಬರಿಗೊಬ್ಬರೂ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ವತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಆಗಿದ್ದು, ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.