ಚಿಕ್ಕಮಗಳೂರು : ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ವೇಳೆ ಓವರ್ ಲೋಡ್ ಆಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸಿ ಪಲ್ಟಿ ಆಗಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ನಡೆದಿದೆ.
ರಸ್ತೆಯಲ್ಲಿ ಅಪ್ ಹತ್ತುವ ವೇಳೆ ಟೈರ್ ಪಂಚರ್ ಆಗಿದ್ದ ಪರಿಣಾಮ, ಹಿಮ್ಮುಖವಾಗಿ ಸಂಚರಿಸಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ನಿಂದ ಚಾಲಕ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.
ಟ್ರ್ಯಾಕ್ಟರ್ ಸಂಪೂರ್ಣ ಜಖಂ ಆಗಿದ್ದು, ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತವಾಗಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಇದನ್ನೂ ಓದಿ : ಹೆಣ್ಣು ಮಗು ಜನಿಸಿತೆಂದು ಹೀಗೆ ಮಾಡೋದಾ.. ಛೇ.. ಇವಳೆಂಥ ಅಮ್ಮ?