ETV Bharat / state

ಪೊಲೀಸರ ಸ್ಥೈರ್ಯ, ಶಕ್ತಿಯನ್ನು ಕುಂದಿಸುವ ಕೆಲಸ ಆಗ್ತಿದೆ: ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಅಣ್ಣಯ್ಯ - etv bharat karnataka

ವಕೀಲರು ಕಾನೂನು ಹೋರಾಟ ಮಾಡಬೇಕು. ಆದ್ರೆ ಈ ರೀತಿ ನಡೆದುಕೊಳ್ಳುವುದು ಸರಿ ಅಲ್ಲವೆಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಅಣ್ಣಯ್ಯ ಹೇಳಿದ್ದಾರೆ.

retired-head-constable-annaiah-reaction-on-dispute-between-police-and-lawyers
ಪೊಲೀಸರ ಸ್ಥೈರ್ಯ, ಶಕ್ತಿಯನ್ನು ಕುಂದಿಸುವ ಕೆಲಸವನ್ನು ವಕೀಲರು ಮಾಡುತ್ತಿದ್ದಾರೆ: ಅಣ್ಣಯ್ಯ
author img

By ETV Bharat Karnataka Team

Published : Dec 4, 2023, 8:40 PM IST

ಚಿಕ್ಕಮಗಳೂರು: "ಪೊಲೀಸರ ಸ್ಥೈರ್ಯ ಮತ್ತು ಶಕ್ತಿಯನ್ನು ಕುಂದಿಸುವ ಕೆಲಸವನ್ನು ವಕೀಲರು ಮಾಡುತ್ತಿದ್ದಾರೆ" ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ನಿವೃತ್ತ ಹೆಡ್​ ಕಾನ್ಸ್​ಟೇಬಲ್​ ಅಣ್ಣಯ್ಯ ಆರೋಪಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಪೊಲೀಸರು ಮತ್ತು ವಕೀಲರ ಸಂಘರ್ಷದ ಕುರಿತು ಮಾತನಾಡಿದ ಅವರು, "ಹೆಲ್ಮೆಟ್ ಹಾಕದೆ ಇವರುವವರನ್ನು ಪೊಲೀಸರು ಹಿಡಿಯುವುದು ಕಾನೂನು ಪ್ರಕಾರ ಸರಿ ಇದೆ" ಎಂದರು.

"ವಕೀಲ ಪ್ರೀತಮ್​ ಎಂಬುವವರನ್ನು ಫೈನ್​ ಕಟ್ಟಿಸಿಕೊಳ್ಳಲು ಠಾಣೆಗೆ ಕರೆದುಕೊಂಡು ಹೋದಾಗ ಕಪಾಳಮೋಕ್ಷ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ವಕೀಲರು ಅರಿಯಬೇಕಾಗುತ್ತದೆ. ಪೊಲೀಸರಿಗೆ ಸ್ವಾಭಿಮಾನ, ರೋಷಾವೇಶ ಇದೆ. ಪೊಲೀಸರು ತಪ್ಪಾಗಿದೆ ಎಂದು ಒಪ್ಪಿಕೊಂಡು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದರೂ, ವಕೀಲರು ಠಾಣೆಗೆ ಬಂದು ಧರಣಿ ಮಾಡಿ ಪೊಲೀಸರಿಗೆ ಬಟ್ಟೆ ಬಿಚ್ಚು ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ" ಎಂದು ಪ್ರಶ್ನಿಸಿದರು.

ಈ ರೀತಿಯ ವರ್ತನೆ ಯಾರೂ ಒಪ್ಪಲ್ಲ: "ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಮುಂದೆ ಎಫ್​ಐಆರ್​ ಅನ್ನು ಹರಿದು ಮುಖಕ್ಕೆ ಎಸೆದು ಗೂಂಡಾಗಿರಿ ವರ್ತನೆ ಮಾಡಿರುವುದನ್ನು ಸಾರ್ವಜನಿಕರು ಒಪ್ಪುತ್ತಾರಾ?. ಈ ಕಾರಣದಿಂದ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ, ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳುವುದಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೇನೆ. ವಕೀಲರು ಕಾನೂನು ಹೋರಾಟ ಮಾಡಬೇಕು. ಅದನ್ನು ಈ ರೀತಿ ವರ್ತಿಸುವುದನ್ನು ಯಾರೂ ಒಪ್ಪಲ್ಲ. ವಕೀಲರ ವರ್ತನೆ ಇದೇ ರೀತಿ ಮುಂದುವರೆದರೆ ನಾನು ರಾಜ್ಯಾದ್ಯಂತ ಇರುವ ಪೊಲೀಸರ ಕುಟುಂಬಗಳನ್ನು ಚಿಕ್ಕಮಗಳೂರು ಎಸ್​ಪಿ ಕಚೇರಿ ಮುಂದೆ ತಂದು ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇನೆ" ಎಂದರು.

ಪೊಲೀಸರ ವಿರುದ್ಧವಾಗಿ ಪ್ರಕರಣ ನಡೆದರೆ ಉಗ್ರ ಹೋರಾಟ: "ಘಟನೆ ಸಂಬಂಧ ವಕೀಲರು ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ನಾಳೆ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಅಲ್ಲಿ ಪೊಲೀಸರ ವಿರುದ್ಧವಾಗಿ ಪ್ರಕರಣ ನಡೆದರೆ ನಾವು ಸುಮ್ಮನೆ ಕೂರುವುದಿಲ್ಲ. ಉಗ್ರ ಹೋರಾಟವನ್ನು ಪೊಲೀಸ್​ ಕುಟುಂಬಗಳ ಜೊತೆ ಮಾಡುತ್ತೇನೆ. ಎಸ್​ಪಿ ಅವರಿಗೆ ಸ್ವಾಭಿಮಾನ ಇದ್ದರೆ ವಕೀಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಿದ್ದೀರಿ, ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ" ಎಂದು ಪ್ರಶ್ನಿಸಿದರು.

ಪಶ್ಚಿಮ ವಲಯ ಐಜಿಪಿ ಡಾ ಚಂದ್ರಗುಪ್ತ ಮಾತನಾಡಿ, "ಪೊಲೀಸರು ಮತ್ತು ವಕೀಲರ ಸಂಘರ್ಷದ ಪ್ರಕರಣವನ್ನು ಸಿಐಡಿಗೆ ನೀಡಿದ್ದೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಕೀಲನ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರದಲ್ಲಿ ಪೊಲೀಸರಿಂದ ರಸ್ತೆ ತಡೆದು ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.