ಚಿಕ್ಕಮಗಳೂರು: ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಪಾರ್ಕ್ನಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಈ ಹಾವು ಬರೋಬ್ಬರಿ 13 ಅಡಿ ಉದ್ದವಿದೆ.
ಇಲ್ಲಿನ ಕ್ಯಾಂಪಸ್ ಪಾರ್ಕ್ನಲ್ಲಿ ಹಾವನ್ನು ನೋಡಿದ ಜನರು ಕೂಡಲೇ ಉರಗ ತಜ್ಞ ಸ್ನೇಕ್ ನರೇಶ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ನರೇಶ್ ಒಂದು ಗಮಟೆಯ ಕಾರ್ಯಾಚರಣೆ ಬಳಿಕ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.
ಇನ್ನು ಕಳೆದ ಕೆಲ ದಿನಗಳ ಹಿಂದೆ ಈ ಹೆಬ್ಬಾವು ರಾತ್ರಿ ಪಾಳೆಯದ ಕಾವಲುಗಾರರ ಕಣ್ಣಿಗೂ ಬಿದ್ದಿತ್ತು. ಅಲ್ಲದೆ ವಾಕಿಂಗ್ ಹೋಗುವರಿಗೂ ಕಾಣಿಸಿಕೊಂಡಿತ್ತು. ಕೊನೆಗೂ ಹೆಬ್ಬಾವು ಸೆರೆಯಾಗಿದ್ದು, ಉರಗ ತಜ್ಞ ನರೇಶ್ ಈ ಹೆಬ್ಬಾವನ್ನು ಸುರಕ್ಷಿತವಾಗಿ ನಗರದ ಹೊರವಲಯದ ಚುರ್ಚೆ ಗುಡ್ಡಕ್ಕೆ ಬಿಟ್ಟಿದ್ದಾರೆ.