ಚಿಕ್ಕಮಗಳೂರು: ಸುಮಾರು 32 ದೇಶಗಳಲ್ಲಿ ಸಿಲುಕಿರುವ 57 ಕನ್ನಡ ಸಂಘಟನೆಗಳ ಜನರೊಂದಿಗೆ ನಾನು ಮಾತನಾಡಿದ್ದು ಪ್ರವಾಸಿಗರು, ವಿದ್ಯಾರ್ಥಿಗಳು ತಮ್ಮ ಸಂಕಷ್ಟದ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಈ ಕುರಿತು ನೋಡೆಲ್ ಅಧಿಕಾರಿ ಹಾಗೂ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಈಗಾಗಲೇ ಏರ್ ಲಿಫ್ಟಿಂಗ್ ಪ್ರಾರಂಭ ಆಗಿದೆ. ಬೇರೆ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಈಗಾಗಲೇ ಬರುತ್ತಿದ್ದು, ಅವರಿಗೆ ಸರ್ಕಾರದ ವತಿಯಿಂದ ರಿಯಾಯಿತಿ ನೀಡಲಾಗಿದೆ. ಹಿರಿಯ ವಯಸ್ಕರಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಮೆರಿಕದಿಂದಲೂ ಜನರನ್ನು ಕರೆತರಲಾಗುತ್ತಿದ್ದು ಸಾಮಾಜಿಕ ಅಂತರ ಕಾಯ್ಡುಕೊಳ್ಳಲಾಗಿದೆ ಎಂದರು. ಬ್ಲೂ ಕಾಲರ್ ಕಾರ್ಮಿಕರನ್ನು ಶಿಪ್ನಲ್ಲಿ ಉಚಿತವಾಗಿ ಕರೆತರಲಾಗುತ್ತಿದೆ. ಕೆಲವರನ್ನು ಅಲ್ಲೇ ಕ್ವಾರಂಟೈನ್ನಲ್ಲಿರಿಸಿ ಕರೆತರುತ್ತಿದ್ದರೆ, ಮತ್ತೆ ಕೆಲವರನ್ನು ಇಲ್ಲಿ ಬಂದ ನಂತರ ಕ್ವಾರಂಟೈನ್ನಲ್ಲಿರಿಸಲಾಗುತ್ತದೆ.
ನಂಜನಗೂಡು ಜುಬಿಲಂಟ್ ಪ್ರಕರಣದ ತನಿಖೆಗೆ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಕೊರೊನಾ ಮೂಲ ಏನು ಎಂಬುದು ಇಂದಿಗೂ ತಿಳಿದುಬಂದಿಲ್ಲ. ಆದರೆ ಈಗ ನಂಜನಗೂಡಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸಿ.ಟಿ. ರವಿ ಹೇಳಿದರು.