ETV Bharat / state

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ,ಕೆಲ ಗ್ರಾಮಗಳ ಸಂಪರ್ಕ ಕಡಿತ..!

author img

By

Published : Oct 22, 2019, 4:51 PM IST

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾಟಿಗನೆರೆ, ಬೇಗೂರು, ಸಿದ್ದಾಪುರ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯೋದಕ್ಕೆ ಪ್ರಾರಂಭಿಸಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆರಾಯ ಆರ್ಭಟಿಸಿ ನಿನ್ನೆ ರಾತ್ರಿಯಿಂದ ತಣ್ಣಗಾಗಿದ್ದ. ಆದರೆ, ಹಳ್ಳ ಕೊಳ್ಳಗಳು ಮಾತ್ರ ಇನ್ನೂ ತುಂಬಿ ಹರಿಯುತ್ತಿರುವುದರಿಂದ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತರೀಕೆರೆ ತಾಲೂಕಿನ ಶಿವನಿ ಗ್ರಾಮದಲ್ಲಿ ಸೇತುವೆ ಮುಳುಗುವ ಹಂತ ತಲುಪಿದ್ದು, ಮಳೆ ನಿಂತರೂ ಅದು ಸೃಷ್ಟಿ ಮಾಡುತ್ತಿರುವ ಅವಾಂತರಗಳು ಮಾತ್ರ ಇನ್ನೂ ನಿಂತಿಲ್ಲ. ಮಳೆ ನೀರು ರಸ್ತೆಯ ಮೇಲೆ ತುಂಬಿ ಹರಿಯುತ್ತಿದ್ದು, ಗಡಿಹಳ್ಳಿ-ಅಣ್ಣಾಪುರ ರಸ್ತೆ ಸಂಪರ್ಕ ಬಂದ್​ ಆಗಿದೆ. ಅಣ್ಣಾಪುರ, ಹೊಸೂರು, ನಂದಿಪುರ ಗ್ರಾಮಗಳ ಕೆರೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ..

ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಬೆಳೆ ಬಹುತೇಕ ನಾಶವಾಗಿದ್ದು, ಒಂದು ದಿನ ಸುರಿದ ಮಳೆಗೆ ಬಯಲು ಸೀಮೆಯ ಜನ ನಲುಗಿ ಹೋಗಿದ್ದಾರೆ.

Intro:Kn_Ckm_01_Rain_avantara_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಮತ್ತೆ ಬಿಟ್ಟು ಬಿಟ್ಟು ಮಳೆ ಸುರಿಯೋದಕ್ಕೆ ಪ್ರಾರಂಭ ಮಾಡಿದೆ.ನಿನ್ನೆ ರಾತ್ರಿಯಿಂದಾ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಹಳ್ಳ ಕೊಳ್ಳಗಳು ಮಾತ್ರ ಇನ್ನು ತುಂಬಿ ಹರಿಯುತ್ತಲೇ ಇದೆ. ಹಳ್ಳದಲ್ಲಿ ಹಾಗೂ ಕೆರೆ ತುಂಬಿ ನೀರು ಹೊರ ಬರುತ್ತಿರುವ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಕೆಲ ಗ್ರಾಮಗಳು ಸಂಪರ್ಕ ಕಳೆದುಕೊಳ್ಳುವ ಹಂತಕ್ಕೆ ನೀರು ಹರಿಯಲು ಪ್ರಾರಂಭ ಮಾಡಿದೆ. ತರೀಕೆರೆ ತಾಲೂಕಿನಲ್ಲಿ ಶಿವನಿ ಗ್ರಾಮದಲ್ಲಿ ಸೇತುವೆ ಮುಳುಗುವ ಹಂತಕ್ಕೆ ತಲುಪಿದ್ದು ಮಳೆ ನಿಂತರು ಅದು ಸೃಷ್ಟಿ ಮಾಡುತ್ತಿರುವ ಅವಾಂತರಗಳು ಮಾತ್ರ ಇನ್ನು ನಿಂತಿಲ್ಲ. ಮಳೆಯ ನೀರು ರಸ್ತೆಯ ಮೇಲೆ ತುಂಬಿ ಹರಿಯುತ್ತಿದ್ದು ಗಡಿಹಳ್ಳಿ - ಅಣ್ಣಾಪುರ ರಸ್ತೆ ಸಂಪರ್ಕ್ ಬಂದ್ ಆಗಿದೆ. ನಿನ್ನೆ ರಾತ್ರಿಯಿಂದಾ ಮಳೆಯ ಪ್ರಮಾಣ ಈ ಭಾಗದಲ್ಲಿ ಕಡಿಮೆಯಾಗಿದ್ದರೂ ಅಣ್ಣಾಪುರ, ಹೊಸೂರು, ನಂದಿಪುರ ಗ್ರಾಮದಲ್ಲಿ ನೀರು ತುಂಬಿ ಹರಿಯುತ್ತಿದೆ. ತರೀಕೆರೆ ತಾಲೂಕಿನ ಕಾಟಿಗನೆರೆ, ಬೇಗೂರು, ಸಿದ್ದಾಪುರ ಸೇರಿ ಸುತ್ತ ಮುತ್ತಲ ಗ್ರಾಮದಲ್ಲಿ ನೀರು ತುಂಬಿ ಹರಿಯುತ್ತಿದ್ದು ನೀರು ರಭಸವಾಗಿ ತುಂಬಿ ಹರಿಯೋದಕ್ಕೆ ಪ್ರಾರಂಭ ಮಾಡಿದೆ.ರಸ್ತೆಯ ಮೇಲೆಯೇ ನೀರು ತುಂಬಿ ಹರಿಯುತ್ತಿದ್ದು ಸಂಚಾರದಲ್ಲಿಯೂ ಅಸ್ತವ್ಯಸ್ಥ ಉಂಟಾಗಿದೆ. ಈರುಳ್ಳಿ ಬೆಳೆ ಮಾತ್ರ ಅಜ್ಜಂಪುರ ಭಾಗದಲ್ಲಿ ಬಹುತೇಕ ನಾಶವಾಗಿದ್ದು ಕೇವಲ ಒಂದು ದಿನ ಸುರಿದ ಮಳೆಗೆ ಬಯಲು ಸೀಮೆಯ ಜನರು ನಲುಗಿ ಹೋಗಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.