ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರದ ಬಳಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ರೈತರ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ.
ಕಾಫಿ ತೋಟಗಳಿಗೆ ನುಗ್ಗಿ ಆರ್ಭಟಿಸುತ್ತಿರುವ ಒಂಟಿ ಸಲಗವೊಂದು ಕಾಫಿ, ಅಡಿಕೆ, ಬಾಳೆಯನ್ನು ನಾಶ ಮಾಡುತ್ತಿದೆ. ಈ ಕುರಿತು ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಸದ್ಯ ಭೈರಾಪುರದ ರಸ್ತೆಯ ಪಕ್ಕದ ಕೆಸರಿನಲ್ಲಿ ಈ ಕಾಡಾನೆ ಆಟವಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಪ್ರತಿನಿತ್ಯ ಈ ಭಾಗದಲ್ಲಿ ಈ ಸಲಗ ಕಾಣಿಸಿಕೊಳ್ಳುತ್ತಿದ್ದು, ರಸ್ತೆಯಲ್ಲಿ ಸಂಚರಿಸೋದಕ್ಕೂ ಜನರು ಭಯ ಪಡುತ್ತಿದ್ದಾರೆ. ಈಗಾಗಲಾದರೂ ಅರಣ್ಯ ಇಲಾಖೆ ರೈತರ ಮನವಿಗೆ ಸ್ಪಂದಿಸಬೇಕಿದೆ.