ಚಿಕ್ಕಮಗಳೂರು: ಗರ್ಭಿಣಿ ಜಿಂಕೆಯೊಂದು ರಸ್ತೆಯಲ್ಲಿ ಓಡಾಡುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿದೆ.
ಜಿಲ್ಲೆಯಲ್ಲಿ ಲಾಕ್ ಡೌನ್ನಿಂದಾಗಿ ರಸ್ತೆಗಳಲ್ಲಿ ಜಿಂಕೆಗಳು ಸ್ವಚ್ಛಂದವಾಗಿ ಓಡಾಟ ನಡೆಸುತ್ತಿದ್ದವು. ಆದರೆ ಐದು ವರ್ಷದ ಜಿಂಕೆ ಮೃತಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಂಕೆಯ ಸಾವಿನಿಂದ ದೂರದಲ್ಲಿ ನಿಂತ ಸಂಗಾತಿಗಳು ರೋದಿಸುತ್ತಿರುವುದು ಕಂಡುಬಂದಿದೆ.
ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಹನ ಸಂಚಾರ ಇಳಿಮುಖವಾದ ಹಿನ್ನಲೆ ಕಾಡು ಪ್ರಾಣಿಗಳು ರಸ್ತೆಗೆ ಬರುತ್ತಿದ್ದು, ರಸ್ತೆಯಲ್ಲಿ ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳ ಓಡಾಟ ಕಂಡು ಬರುತ್ತಿದೆ.