ಚಿಕ್ಕಮಗಳೂರು: ಲಾಕ್ಡೌನ್ನಿಂದಾಗಿ ಹೊತ್ತು ಊಟಕ್ಕೆ ಪರದಾಟ ನಡೆಸುತ್ತಿರುವವರಿಗೆ ಧೈರ್ಯ ತುಂಬಲು ಮತ್ತು ನಿಮ್ಮ ಉಪವಾಸದಲ್ಲಿ ನಾವೂ ಪಾಲುದಾರರು ಎಂದು ತೋರಿಸಸುವ ಉದ್ದೇಶದಿಂದಾಗಿ ಮಾಜಿ ಶಾಸಕ ವೈ.ಎಸ್.ವಿ ದತ್ತ ನೇತೃತ್ವದಲ್ಲಿ 12 ಗಂಟೆಗಳ ಉಪವಸ ನಡೆಸಲಾಗುತ್ತಿದೆ.
ಅಸಂಘಟಿತ ಕಾರ್ಮಿಕರು, ಕೂಲಿ ಕಾರ್ಮಿಕರು, ರೈತರು, ಹಸಿವಿನಿಂದ ಬಳಲುತ್ತಿದ್ದಾರೆ, ಇದಕ್ಕೆ ನಾವೂ ಕೂಡ ಕಾರಣೀಕೃತರು ಹಾಗಾಗಿ ನಗರದ ಶಂಕರಪುರ ಬಡಾವಣೆಯಲ್ಲಿ ಸಾವಿತ್ರಮ್ಮ ಎಂಬುವವರ ಮನೆಯಲ್ಲಿ 12 ಗಂಟೆಗಳ ಕಾಲ ಉಪವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿದ ದತ್ತ, ನಿರ್ಗತಿಕರು, ಬಡವರು, ವಲಸಿಗರು, ಊಟವಿಲ್ಲದೆ ಉಪವಾಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ನಾವು ನಿಮ್ಮ ಜೊತೆ ಇದ್ದೇವೆ ಎಂಬ ಸಂಕಲ್ಪಕ್ಕಾಗಿ ಉಪವಾಸ ಮಾಡಲಾಗುತ್ತಿದೆ. ಸಮಾನ ಮನಸ್ಕರೊಂದಿಗೆ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ. ಪ್ರಮುಖವಾಗಿ ಆಡಳಿತ ನಡೆಸುವ ಸರ್ಕಾರಗಳನ್ನು ಎಚ್ಚರಿಸುವ ಸಲುವಾಗಿ ಉಪವಾಸ ಕಾರ್ಯಕ್ರಮ, ಕೊರೊನಾ ಸಮಸ್ಯೆ ಮುಗಿದ ನಂತರ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೆಚ್ಚಿನ ಹೋರಾಟ ಮಾಡಲಾಗುತ್ತದೆ ಎಂದರು.