ಚಿಕ್ಕಮಗಳೂರು: ಆಟೋಗೆ ಕಾರು ಅಡ್ಡ ಬಂದಿದ್ದು, ಆಟೋ ಚಾಲಕ ಸಿನಿಮೀಯ ರೀತಿಯಲ್ಲಿ ಹೊರನೆಗೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಿಂತಿದ್ದ ಕಾರು ಏಕಾಏಕಿ ರಸ್ತೆಗೆ ನುಗ್ಗಿದ ಕಾರಣ ಕಾರನ್ನು ತಪ್ಪಿಸಲು ಹೋಗಿ ನಿಂತಿದ್ದ ಆ್ಯಂಬುಲೆನ್ಸ್ಗೆ ಆಟೋ ಡಿಕ್ಕಿ ಹೊಡೆದಿದೆ. ಚಾಲಕ ಆಟೋದಿಂದ ಜಿಗಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.