ETV Bharat / state

ಚಿಕ್ಕಬಳ್ಳಾಪುರ: ಅಂತರ್ಜಲ ಅಭಿವೃದ್ಧಿಯಲ್ಲಿ ರಾಮಾಪುರ ಗ್ರಾಮದ ವಿಶೇಷ ಸಾಧನೆ - ಅಂತರ್ಜಲ ಅಭಿವೃದ್ಧಿ

ಕಳೆದೆರಡು ದಶಕಗಳಿಂದ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಚಿಕ್ಕಬಳ್ಳಾಪುರದ ಜನತೆ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಇದೀಗ ಅಂತರ್ಜಲ ಅಭಿವೃದ್ಧಿ ನಿಟ್ಟಿನಲ್ಲಿ ಗೌರಿಬಿದನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ತೆಗೆದುಕೊಂಡ ಕ್ರಮಗಳು ಮಾದರಿಯಾಗಿವೆ.

chikballapur ground water
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿ
author img

By

Published : May 18, 2020, 6:40 PM IST

Updated : May 19, 2020, 11:51 AM IST

ಚಿಕ್ಕಬಳ್ಳಾಪುರ: ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ಅಂತರ್ಜಲ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಶ್ರಮಿಸುತ್ತಿವೆ. ಅದರಲ್ಲಿ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೆ ಬ್ಯಾಲ್ಯ ಗ್ರಾಮದ ಕೆರೆಯಲ್ಲಿ ಅತ್ಯಂತ ಜನಪರ ಕಾಳಜಿಯುಳ್ಳ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕೆರೆಯ ಸುತ್ತ ಇದೀಗ ಪ್ರಾಣಿ, ‌ಪಕ್ಷಿಗಳಿಗೆ ನೀರು, ಆಹಾರ ಹಾಗೂ ಅಂತರ್ಜಲ ಮಟ್ಟದ ಅಭಿವೃದ್ಧಿಯೂ ಆಗುತ್ತಿದೆ.

ಕುದುರೆಬ್ಯಾಲ್ಯದ ಈ ಕೆರೆಯ ಬಳಿ ನರೇಗಾ ಕಾಮಗಾರಿ ಹಾಗೂ ಗ್ರಾಮ ಪಂಚಾಯಿತಿ ಅನುದಾನದಲ್ಲಿ ನೇರಳೆ, ಸಪೋಟ, ಮಾವು ಸೇರಿದಂತೆ ಸಾಕಷ್ಟು ಗಿಡ ಮರಗಳನ್ನು ಬೆಳೆಯಲಾಗಿದೆ. ಇದರ ಜೊತೆಗೆ ಕೆರೆಯ ಅಭಿವೃದ್ಧಿಯೂ ಆಗುತ್ತಿದೆ. ಈ ಮೂಲಕ ಈ ಗ್ರಾಮ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ground water increasing at rmapur village
ಚಿಕ್ಕಬಳ್ಳಾಪುರ ಜಿಲ್ಲೆಯ ರಾಮಾಪುರದಲ್ಲಿ ಅಂತರ್ಜಲ ಅಭಿವೃದ್ಧಿ

ನಮ್ಮ ಗ್ರಾಮ ವನ್ಯ-ಧಾಮ ಬಯಲುಸೀಮೆ ಮಲೆ ನಾಡಾಗಲಿ ಹಾಗೂ ಜಲಾಮೃತ ಎಂಬ ಶೀರ್ಷಿಕೆಯಿಂದ ಎಲ್ಲರನ್ನು ಇತ್ತ ಆಕರ್ಷಿಸುತ್ತಿದೆ. ಗ್ರಾಮೋದ್ಧಾರಕ್ಕೆ ಶ್ರಮಿಸುತ್ತಿರುವ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ಪಡೆಯುತ್ತಿದ್ದಾರೆ.

Last Updated : May 19, 2020, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.