ETV Bharat / state

ಡಿ ಕೆ ಶಿವಕುಮಾರ್​​ಗೆ ಕೋವಿಡ್ ಬಗ್ಗೆ ಗೊತ್ತಿಲ್ಲ ಅನಿಸುತ್ತೆ: ಸಚಿವ ಸುಧಾಕರ್ ಟಾಂಗ್​

author img

By

Published : Jan 5, 2022, 7:10 PM IST

ಒಮಿಕ್ರಾನ್ ಬಹಳ ಬೇಗ ಹರಡುತ್ತಿದೆ. ಬೆಂಗಳೂರಿಗೆ ವಿಶೇಷ ಮಾರ್ಗಸೂಚಿ ಪ್ರಕಟ ಮಾಡಿದ್ದೇವೆ. ಜನಸಾಂದ್ರತೆ ಹೆಚ್ಚಾಗಿರೋದರಿಂದ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಜನ ಬರ್ತಿರೋದು ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು ಸಚಿವ ಸುಧಾಕರ್​ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಹೇಳಿಕೆ
ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಹೇಳಿಕೆ

ಚಿಕ್ಕಬಳ್ಳಾಪುರ : ವೀಕೆಂಡ್ ಲಾಕ್​ಡೌನ್ ಮೂಲಕ ಬಡವರ ಕೊಲೆಗೆ ಸರ್ಕಾರ ಹೊರಟಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಡಿ ಕೆ ಶಿವಕುಮಾರ್ ಅವರ ಹೇಳಿಕೆ ದುರದೃಷ್ಟಕರ. ಅವರಿಗೆ ಕೋವಿಡ್ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಹೇಳಿಕೆ

ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಯುವ ಲಸಿಕಾ ಮೇಳ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದುರದೃಷ್ಟಕರ ಏನೆಂದರೆ ಅಂತಹ ನಾಯಕರು ಇಂತಹ ಮಾತಗಳನ್ನಾಡಿರೋದು. ಕೋವಿಡ್ ಬಗ್ಗೆ ಡಿ ಕೆ ಶಿವಕುಮಾರ್ ವಿಷಯ ತಿಳಿಕೊಂಡಿಲ್ಲ ಅಂತ ಅನ್ಕೊಂಡಿದ್ದೇನೆ ಎಂದು ಟಾಂಗ್ ಕೊಟ್ಟರು.

ಮಕ್ಕಳ ಹಿತ ಬಯಸಿ ಬೆಂಗಳೂರಲ್ಲಿ ಶಾಲೆ ಬಂದ್ ಮಾಡಲಾಗಿದ್ದು, ಸರ್ಕಾರದ ಜೊತೆ ಜನ ಸಹಕರಿಸಬೇಕು. ಕೋವಿಡ್​ನ ಎರಡು ಅಲೆಗಳನ್ನು ಎದುರಿಸಿ‌ ನಿಯಂತ್ರಣಕ್ಕೆ ತಂದಿದ್ದೇವೆ. ಇದು ಮೂರನೇ ಅಲೆ‌, ಕೊನೆ ಅಲೆ ಅಂತ ಭಾವಿಸಿದ್ದೇವೆ‌. ಆದಷ್ಟು ಬೇಗ ಒಮಿಕ್ರಾನ್​ನಿಂದಲೂ ಸಹ ನಾವು ಹೊರ ಬರುತ್ತೇವೆ. ಮಕ್ಕಳು ಲಸಿಕೆ ಪಡೆಯುವುದರ ಜೊತೆಗೆ ಮಾಸ್ಕ್ ಧರಿಸುವಂತೆ ಸಚಿವರು ಸಲಹೆ‌ ನೀಡಿದರು.

ಒಮಿಕ್ರಾನ್ ಬಹಳ ಬೇಗ ಹರಡುತ್ತಿರುವುದರಿಂದ ಬೆಂಗಳೂರಿಗೆ ವಿಶೇಷ ಮಾರ್ಗಸೂಚಿ ಪ್ರಕಟಿಸಿದ್ದೇವೆ. ಜನಸಾಂದ್ರತೆ ಹೆಚ್ಚಾಗಿರೋದರಿಂದ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಜನ ಬರ್ತಿರೋದು ಸೋಂಕು ಹೆಚ್ಚಾಗಲು ಕಾರಣವಾಗಿದೆ. ಬೆಂಗಳೂರಲ್ಲಿ ಶಾಲೆಗಳನ್ನ ಬಂದ್ ಮಾಡಿದ್ದೇವೆ. ಆದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಆ ತೀರ್ಮಾನ ಮಾಡಿಲ್ಲ.

ಶಿಕ್ಷಕರು ನಿಮ್ಮ ನಿಮ್ಮ ಶಾಲೆಗಳಲ್ಲಿ ಸುರಕ್ಷತವಾಗಿ ನೋಡಿಕೊಳ್ಳುವ ಹೊಣೆಗಾರಿಕೆ ತೆಗೆದುಕೊಳ್ಳಬೇಕಾಗಿದೆ. ನಮ್ಮ ದೇಶದ ಭವಿಷ್ಯ ಮಕ್ಕಳು, ಯುವಕರು. ಲಸಿಕಾಕರಣ ಯಶಸ್ವಿಯಾಗಲಿ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.