ಚಿಕ್ಕಬಳ್ಳಾಪುರ: ವಿವಾಹಿತೆಯ ಹಿಂದೆ ಬಿದ್ದ ಮತ್ತೊಬ್ಬ ವಿವಾಹಿತ ತನ್ನನ್ನು ಪ್ರೀತಿಸುವಂತೆ ವಿವಾಹಿತೆಗೆ ದುಂಬಾಲು ಬಿದ್ದಿದ್ದ. ಅಲ್ಲದೇ ವಿವಾಹಿತೆಯ ಫೋಟೋವನ್ನು ಸಾಮಾಜಿಕ ಜಾತಲಾಣದಲ್ಲಿ ಹರಿಬಿಟ್ಟಿದ್ದ. ಇದಕ್ಕೆ ಮನನೊಂದ ಜಿಲ್ಲೆಯ ಚಿಂತಾಮಣಿ ನಗರದ ಚೌಡರೆಡ್ಡಿ ಪಾಳ್ಯಾದ ವಿವಾಹಿತೆ ನೇಣಿಗೆ ಶರಣಾಗಿದ್ದಾಳೆ.
ಹೈಸ್ಕೂಲ್ನಲ್ಲೆ ಓದುತ್ತಿದ್ದಾಗಲೇ ವಿವಾಹವಾಗಿದ್ದ ವಿವಾಹಿತೆ ಕೌಟುಂಬಿಕ ಕಲಹದಿಂದ ತಂದೆಯ ಮನೆಗೆ ಬಂದಿದ್ದಳು. ಅದೇ ಊರಿನವನಾದ ಸಯ್ಯದ್ ನಾಸೀರ್ ವಿವಾಹಿತೆಯ ಹಿಂದೆ ಪ್ರೀತಿ ಮಾಡುವುದಾಗಿ ತಿರುಗಾಡುತ್ತಿದ್ದ.
ವಿವಾಹಿತೆಯ ವಿರೋಧ ಇದ್ದರೂ ಅವಳಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ತಿಳಿದ ವಿವಾಹಿತೆಯ ಅಣ್ಣ ಇರ್ಫಾನ್ ಬುದ್ಧಿ ಹೇಳಿದ್ದ. ಆದರೆ, ನಾಸೀರ್ ಫೇಸ್ಬುಕ್ನಲ್ಲಿ ವಿವಾಹಿತೆಯ ಫೋಟೋವನ್ನು ಹಾಕಿಕೊಂಡಿದ್ದ. ಇದಕ್ಕೆ ಮನನೊಂದು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇರ್ಫಾನ್ ಆರೋಪಿಸಿದ್ದಾನೆ.
ಸಯ್ಯದ್ ನಾಸೀರ್ನ ಕಿರುಕುಳ ಬ್ಲಾಕ್ ಮೇಲ್ ಹಾಗೂ ಫೋಟೊ ಪೋಸ್ಟ್ನಿಂದಲೇ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶಗೊಂಡ ವಿವಾಹಿತೆ ಸಹೋದರರು ಹಾಗೂ ಸಂಬಂಧಿಗಳು ನಾಸೀರ್ ಮನೆಗೆ ಹಲ್ಲೆ ಮಾಡಿದ್ದಾರೆ.
ನಂತರ ನಾಸೀರ್ ಮತ್ತು ಕುಟುಂಬ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದೆ. ಇದರೊಂದಿಗೆ ವಿವಾಹಿತೆಯ ನೋವಿನ ಬಾಲ್ಯ ವಿವಾಹದ ಕಥೆಯೂ ತೆರೆದುಕೊಳ್ಳುತ್ತೆ. ವಿವಾಹಿತೆಗೆ ಬಂದ ಗತಿ ರಾಜ್ಯದಲ್ಲಿ ಯಾವುದೇ ಹೆಣ್ಣು ಮಗಳಿಗೂ ಆಗಬಾರದು ಎಂದು ಸಂಬಂಧಿಗಳು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : ಆಸ್ತಿಗಾಗಿ ತಂದೆಯನ್ನೇ ಕೊಲ್ಲಲು ಮುಂದಾದ ಕುಡುಕ ಮಗ: ಸಿಸಿಟಿವಿ ವಿಡಿಯೋ ಭಯಾನಕ