ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿಯಲ್ಲಿ ಜಿಲಿಟಿನ್ ಸ್ಫೋಟ ದುರಂತದ ಬೆನ್ನಲ್ಲೇ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ಕೆರೆಗೆ ಬಿಸಾಡಿರುವ ಘಟನೆ ತಾಲೂಕಿನ ಪೆರೆಸಂದ್ರ ಬಳಿಯ ಚಿಕ್ಕನಾಗವಲ್ಲಿ ಕೆರೆಯ ಬಳಿ ಪತ್ತೆಯಾಗಿದೆ.
ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟಕ್ಕೆ 6 ಮಂದಿ ಬಲಿಯಾಗಿದ್ದರು. ಈ ಘಟನೆ ನಡೆದ ಎರಡೇ ದಿನಕ್ಕೆ ಮುತಕದಹಳ್ಳಿ ಕೆರೆಯ ಬಳಿಯ ಕಾಲುವೆಯಲ್ಲಿ 393 ಜಲಿಟಿನ್ ಕಡ್ಡಿಗಳು ಸೇರಿದಂತೆ ಚೀಲದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಈಗಾಗಲೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಸಿಬ್ಬಂದಿ ಭೇಟಿ ನೀಡಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿ ವಸ್ತುಗಳನ್ನು ಸಂಗ್ರಹಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸ್ಫೋಟ ಆಗುವ ಭಯದಿಂದ ಜಿಲೆಟಿನ್ಗಳನ್ನು ಬಿಸಾಡಿದ್ದಾರೆ ಎನ್ನಲಾಗ್ತಿದೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಹಾಗೂ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ಹಿರೇನಾಗವಲ್ಲಿ ಕ್ವಾರಿ ಬಳಿ ಸ್ಫೋಟದ ನಂತರ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ದುಷ್ಕರ್ಮಿಗಳು ಕೆರೆಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.