ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಂಡಲಹಳ್ಳಿ ಗ್ರಾಮದ ಟೈಲರ್ ಎಂ. ಆನಂದ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ಆದರೂ ತಮ್ಮ ಮೂಲ ವೃತ್ತಿಯನ್ನು ಮುಂದುವರಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಕುರುಬೂರು ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿರುವ ಆನಂದ್ ಮೊದಲಿನಿಂದಲೂ ಟೈಲರಿಂಗ್ ಕೆಲಸ ಮಾಡುತ್ತ ಬಂದಿದ್ದಾರೆ. ಈಗಲೂ ಅದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ಓದಿ: ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯಶ್ವರ ರಥೋತ್ಸವ
ಇವರು ಡಿಪ್ಲೊಮಾ ಓದಿದ್ದು, ಎಲೆಕ್ಟ್ರಿಕಲ್ ಹೋಂ ಗಾರ್ಡ್ ಕೆಲಸ ಸೇರಿದಂತೆ ದೀನ್ ದಯಾಳ್ ಕೌಶಲ್ಯ ಕೇಂದ್ರದಲ್ಲಿ ಟೈಲರ್ ತರಬೇತುದಾರರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ನಂತರ ಸ್ವಂತ ಗ್ರಾಮದಲ್ಲೇ ಟೈಲರ್ ಕೆಲಸವನ್ನು ಪ್ರಾರಂಭಿಸಿ ಮಹಿಳೆಯರಿಗೆ, ಯುವಕ- ಯುವತಿಯರಿಗೆ ಟೈಲರಿಂಗ್ ತರಬೇತಿ ನೀಡುವ ವೃತ್ತಿಯನ್ನು ಮಾಡುತ್ತಿದ್ದರು. ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಜೊತೆಗೆ ತನ್ನ ಟೈಲರ್ ವೃತ್ತಿಯನ್ನು ಮುಂದುವರೆಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮಾತಾಗುತ್ತಿದ್ದಾರೆ.