ETV Bharat / state

ಸಹಜ ಸ್ಥಿತಿಗೆ ಮರಳಿದ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲು: ಡಿಸಿಎಂ

author img

By

Published : Sep 15, 2020, 8:16 PM IST

ಚಿಕ್ಕಬಳ್ಳಾಪುರದ ಅಂಗಟ್ಟ ಗ್ರಾಮದಲ್ಲಿ ವಿಶ್ವೇಶ್ವರಯ್ಯ ಇಂಟರ್​​ನ್ಯಾಷನಲ್ ಇನ್​​​ಸ್ಟಿಟ್ಯೂಟ್​ ಫಾರ್ ಸೂಪರ್ ಟ್ರೈನರ್ಸ್​​​ ಸಂಸ್ಥೆಯ ಕಟ್ಟಡದ ಶಂಕುಸ್ಥಾಪನೆಯನ್ನು ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ ನೆರವೇರಿಸಿದರು.

dcm-statement-on-corona-unlock
ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ

ಚಿಕ್ಕಬಳ್ಳಾಪುರ: ಕೊರೊನಾ ಲಾಕ್​​​​ಡೌನ್ ಅನ್​​ಲಾಕ್ ನಂತರ ಸಹಜ ಸ್ಥಿತಿಗೆ ಮರಳಿರುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ ಹೇಳಿದರು.

ಮಹಾರಾಷ್ಟ್ರಕ್ಕಿಂತ ಎರಡು ಪಟ್ಟು ದೊಡ್ಡ ರಾಜ್ಯ ಕರ್ನಾಟಕ. ಆರ್ಥಿಕವಾಗಿಯೂ ಅಷ್ಟೇ. ಅದಕ್ಕೆ ರಾಜ್ಯದ ಜನತೆ ಸಹಕಾರವೇ ಕಾರಣ. ಇಡೀ ದೇಶಕ್ಕೆ ಕರ್ನಾಟಕ ಸರ್ಕಾರ ಮಾದರಿಯಾಗಿದೆ. ಜನತೆಗೆ ಪೂರಕವಾಗಿದೆ ಎಂದು ತಿಳಿಸಿದರು.

ಡ್ರಗ್ಸ್ ಮಾಫಿಯಾ ಬಗೆದಷ್ಟು ಆಳವಾಗಿರುವ ಕಾರಣ ಅದರ ತಹಬದಿಗೆ ತರಲು ಗೃಹ ಇಲಾಖೆ ಮತ್ತಿತರ ಇಲಾಖೆಗಳು ಶತಪ್ರಯತ್ನ ನಡೆಸುತ್ತಿವೆ. ಇಲಾಖೆಗಳ ಸಹಕಾರದಿಂದ ಡ್ರಗ್ಸ್ ಸ್ಟೋರ್ಸ್, ಸಪ್ಲೈ ಚೈನ್ ಮತ್ತು ಬಳಕೆಗೆ ಕಡಿವಾಣ ಹಾಕಿ, ಸಮಾಜ ರಕ್ಷಣೆಗೆ ಸರ್ಕಾರ ಯತ್ನಿಸುತ್ತಿದೆ. ಡ್ರಗ್ಸ್ ಮೊದಲಿಂದಲೂ ಬಳಕೆಯಲ್ಲಿದ್ದು, ಬೆಳೆದು ಹೆಮ್ಮರವಾಗಿದೆ. ಅದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಿಕ್ಕಬಳ್ಳಾಪುರದ ಅಂಗಟ್ಟ ಗ್ರಾಮದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ವಿಶ್ವೇಶ್ವರಯ್ಯ ಇಂಟರ್​​ನ್ಯಾಷನಲ್ ಇನ್​​​ಸ್ಟಿಟ್ಯೂಟ್​ ಫಾರ್ ಸೂಪರ್ ಟ್ರೈನರ್ಸ್​​​ ಸಂಸ್ಥೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.