ETV Bharat / state

ಜಪಾನ್​ನಿಂದ ಚಾಮರಾಜನಗರಕ್ಕೆ ಟೆಕ್ಕಿ ಆಗಮನ: ವೈದ್ಯರಿಂದ ತಪಾಸಣೆ - ಕೊರೊನಾ ವೈರಸ್

ಜಪಾನ್​ನಿಂದ ಗಡಿ ಜಿಲ್ಲೆ ಚಾಮರಾಜನಗರಕ್ಕೆ ವ್ಯಕ್ತಿಯೋರ್ವ ಆಗಮಿಸಿದ್ದು, ಆತನನ್ನು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬಳಿಕ ಸ್ಥಳೀಯರೇ ವೈದ್ಯರನ್ನು ಕರೆಸಿ ಆತನ ಗಂಟಲು ದ್ರವವನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದಾರೆ.

Throat fluid
ಜಪಾನ್​ನಿಂದ ಗಡಿಜಿಲ್ಲೆಗೆ ಟೆಕ್ಕಿ ಆಗಮನ: ವೈದ್ಯರಿಂದ ಗಂಟಲು ದ್ರವ ಪರೀಕ್ಷೆ
author img

By

Published : Mar 16, 2020, 10:24 PM IST

ಚಾಮರಾಜನಗರ: ಜಪಾನ್​ನಿಂದ ಬಂದಿದ್ದ ಟೆಕ್ಕಿಯೋರ್ವನ ಗಂಟಲು ದ್ರವವನ್ನು ವೈದ್ಯರು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ದ್ವೀಪ ಗ್ರಾಮ ಎಡಕುರಿಯಾದಲ್ಲಿ ನಡೆದಿದೆ.

ಟೆಕ್ಕಿಯು ಯಡಕುರಿಯಾ ಗ್ರಾಮದವರಾಗಿದ್ದು, ಜಪಾನ್​ನಿಂದ 2 ದಿನಗಳ ಹಿಂದೆ ಕುಟುಂಬ ಸಮೇತ ಹಿಂತಿರುಗಿದ್ದಾನೆ. ಆದರೆ ಬೆಂಗಳೂರಿನಲ್ಲೇ ಕುಟುಂಬ ಸದಸ್ಯರನ್ನು ಬಿಟ್ಟು ಸ್ವಗ್ರಾಮಕ್ಕೆ ಟೆಕ್ಕಿ ಮಾತ್ರ ಆಗಮಿಸಿದ್ದಾನೆ. ಈ ವೇಳೆ ಸ್ಥಳೀಯರೇ ವೈದ್ಯರಿಗೆ ಮಾಹಿತಿ ನೀಡಿ ಆ ಟೆಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

ವೈದ್ಯರು ಆತನ ಗಂಟಲು ದ್ರವ, ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಯಾರೊಬ್ಬರಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.