ETV Bharat / state

ಟಾಟಾ ಏಸ್ ಪಲ್ಟಿ: ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿಗೆ ಗಾಯ - chamaranajagar

ಭೀಮನ ಅಮಾವಾಸ್ಯೆ ಹಿನ್ನೆಲೆ ಕೋಡಹಳ್ಳಿ ಮಹದೇಶ್ವರ ದೇಗುಲಕ್ಕೆ ಬರುತ್ತಿದ್ದ ವೇಳೆ ಟಾಟಾ ಏಸ್ ಪಲ್ಟಿಯಾಗಿದೆ.

Tata ace accident
ಟಾಟಾ ಏಸ್ ಪಲ್ಟಿ
author img

By

Published : Jul 17, 2023, 7:20 PM IST

ಟಾಟಾ ಏಸ್ ಪಲ್ಟಿ: ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರ: ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಾಲಯಕ್ಕೆ ತೆರಳುತ್ತಿದ್ದ ಟಾಟಾ ಏಸ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಅಂಕಹಳ್ಳಿ ಗ್ರಾಮದ ನಿರ್ಮಲಾ, ಬೆಳ್ಳಯ್ಯ, ಬೇಬಿ(11), ಮಧನ್(9), ಗಂಗಮ್ಮ, ಪವಿತ್ರಾ, ಸೋಮಣ್ಣ ಸೇರಿದಂತೆ 16 ಮಂದಿಗೆ ತಲೆ, ಮುಖಕ್ಕೆ ತೀವ್ರ ಪೆಟ್ಟು ಬಿದ್ದಿದ್ದು ಚಾಮರಾಜನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದವರಿಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಲಾಗುತ್ತಿದೆ.

ಭೀಮನ ಅಮಾವಾಸ್ಯೆ ಪ್ರಯುಕ್ತ ಕೋಡಹಳ್ಳಿ ಮಹದೇಶ್ವರ ದೇಗುಲಕ್ಕೆ 20ಕ್ಕೂ ಹೆಚ್ಚು ಟಾಟಾ ಏಸ್ ವಾಹನದಲ್ಲಿ ಬರುತ್ತಿದ್ದ ವೇಳೆ, ಶಿವಪುರ ಸಮೀಪ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಈ ಅನಾಹುತ ಘಟಿಸಿದೆ ಎನ್ನಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಎರಡೂ ಪ್ರತ್ಯೇಕ ಅಪಘಾತ.. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ.. ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ

ಶಾಲಾ ವಾಹನ ಪಲ್ಟಿ: ಚಾಲಕನ ನಿರ್ಲಕ್ಷ್ಯದಿಂದ ಶಾಲಾ ವಾಹನ ಪಲ್ಟಿ ಹೊಡೆದು, ಮಕ್ಕಳು ಅದೃಷ್ಡವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ಇತ್ತೀಚೆಗೆ ನಡೆದಿತ್ತು. ಟಾಟಾ ಮ್ಯಾಜಿಕ್​ ವಾಹನದಲ್ಲಿ 35 ಮಕ್ಕಳನ್ನು ತುಂಬಿಕೊಂಡು ಚಾಲಕ ಹೋಗುತ್ತಿದ್ದ ಅವಘಡ ನಡೆದಿತ್ತು. ಬೈಲಹೊಂಗಲ ಸಮೀಪದ ಮರಕುಂಬಿಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನ ಇದಾಗಿತ್ತು. ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬಿಕೊಂಡು ಹೋಗಿರುವುದು ಕೂಡ ಶಾಲಾ ನಿರ್ಲಕ್ಷ್ಯ ಮತ್ತು ಚಾಲಕನ ಬೇಜಬ್ದಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು.

ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಹಳೆಯದಾಗಿದ್ದು ಇದನ್ನೇ ಬಳಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.‌ ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಮತ್ತು ವಾಹನ ಚಾಲಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದರು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಶಾಲಾ ವಾಹನ ಪಲ್ಟಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ‌ ಮಕ್ಕಳು ಪಾರು..!

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇತ್ತೀಚೆಗೆ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಸಂಭವಿಸಿತ್ತು. ಮೃತ ವೈದ್ಯರನ್ನು ಸ್ಥಳೀಯ ಮಣಿಪಾಲ ಆಸ್ಪತ್ರೆಯ ಡಾ. ಸೂರ್ಯನಾರಾಯಣ ಎಂದು ಗುರುತಿಸಲಾಗಿತ್ತು. ಮೂಲತಃ ಅವರು ಬೆಂಗಳೂರಿನವರು. ಜೊತೆಗಿದ್ದ ಅವರ ಗೆಳೆಯರಾದ ಕೇರಳದ ಸಂಗೀತ್ ಮತ್ತು ಉತ್ತರ ಪ್ರದೇಶದ ದಿವಿತ್ ಸಿಂಗ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

ಇದನ್ನೂ ಓದಿ: Manipal Accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಮಣಿಪಾಲ ಆಸ್ಪತ್ರೆ ವೈದ್ಯ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.